Monday, September 15, 2025

Why So | ಊಟ ಮಾಡಿದ ನಂತರ ಸ್ನಾನ ಯಾಕೆ ಮಾಡ್ಬಾರ್ದು ಗೊತ್ತಾ?

ದೇಹವನ್ನು ಸ್ವಚ್ಛವಾಗಿಡಲು ಮತ್ತು ಮನಸ್ಸಿಗೆ ತಂಪು ನೀಡಲು ಸ್ನಾನ ಅತ್ಯಂತ ಮುಖ್ಯ. ಬೆಳಗ್ಗೆ ಅಥವಾ ರಾತ್ರಿ ಸ್ನಾನ ಮಾಡುವುದರಿಂದ ದೇಹ ಫ್ರೆಶ್ ಆಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ತಜ್ಞರ ಪ್ರಕಾರ, ಊಟ ಮಾಡಿದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಅನೇಕರು ಇದನ್ನು ದಿನನಿತ್ಯ ಪಾಲಿಸುತ್ತಾರೆ, ಆದರೆ ಇದರ ಪರಿಣಾಮ ಗಂಭೀರವಾಗಬಹುದು.

ಜೀರ್ಣಕ್ರಿಯೆಗೆ ತೊಂದರೆ
ಊಟದ ಬಳಿಕ ದೇಹದ ಮುಖ್ಯ ಶಕ್ತಿ ಜೀರ್ಣಕ್ರಿಯೆಗೆ ಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀರ್ಣಕ್ರಿಯೆಯ ಪ್ರಕ್ರಿಯೆ ನಿಧಾನವಾಗುತ್ತದೆ. ಇದರಿಂದ ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ನರಮಂಡಲದ ಮೇಲೆ ಒತ್ತಡ
ಊಟವಾದ ತಕ್ಷಣ ನರಮಂಡಲವು ಜೀರ್ಣಕ್ರಿಯೆಯನ್ನು ವೇಗಗೊಳಿಸಲು ಕೆಲಸ ಮಾಡುತ್ತದೆ. ಸ್ನಾನ ಮಾಡಿದರೆ ಈ ಕಾರ್ಯ ನಿಧಾನಗೊಳ್ಳುತ್ತದೆ. ಇದರ ಪರಿಣಾಮವಾಗಿ ನರಮಂಡಲದ ಮೇಲೆ ಒತ್ತಡ ಬೀಳುತ್ತದೆ ಮತ್ತು ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ರಕ್ತ ಪರಿಚಲನೆಯಲ್ಲಿ ವ್ಯತ್ಯಯ
ಸ್ನಾನ ಮಾಡುವಾಗ ದೇಹವನ್ನು ತಂಪಾಗಿಸಲು ಚರ್ಮದ ಮೂಲಕ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆದರೆ ಊಟದ ಬಳಿಕ ದೇಹದಲ್ಲಿ ರಕ್ತ ಪರಿಚಲನೆ ಈಗಾಗಲೇ ಜೀರ್ಣಕ್ರಿಯೆಗೆ ತ್ವರಿತವಾಗಿ ನಡೆಯುತ್ತಿರುವುದರಿಂದ, ಸ್ನಾನ ಆ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುತ್ತದೆ. ಇದರಿಂದ ದೇಹದಲ್ಲಿ ಅಸಮತೋಲನ ಉಂಟಾಗಬಹುದು.

ಯಾವಾಗ ಸ್ನಾನ ಮಾಡ್ಬೇಕು?
ಸ್ನಾನ ದೇಹದ ಆರೋಗ್ಯಕ್ಕಾಗಿ ಅವಶ್ಯಕವಾದರೂ, ಊಟ ಮಾಡಿದ ತಕ್ಷಣ ಸ್ನಾನ ಮಾಡುವುದು ತಪ್ಪು. ತಜ್ಞರ ಸಲಹೆಯಂತೆ ಊಟ ಮಾಡಿದ ಕನಿಷ್ಠ 1.5 ರಿಂದ 2 ಗಂಟೆಗಳ ಬಳಿಕ ಸ್ನಾನ ಮಾಡಿದರೆ ಜೀರ್ಣಕ್ರಿಯೆ ಸುಗಮವಾಗುತ್ತದೆ ಮತ್ತು ದೇಹ ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ