ಮೇಷ
ನೀವಿಂದು ವಿರಾಮ ಬಯಸಿದರೂ ಅದು ಸಿಗದು. ದಿನವಿಡೀ ಕೆಲಸದ ಹೊರೆ. ಕೌಟುಂಬಿಕ ಉದ್ವಿಗ್ನತೆ ಶಾಂತಿ ಕದಡಲು ಅವಕಾಶ ಕೊಡದಿರಿ.
ವೃಷಭ
ಆರ್ಥಿಕ ಚಿಂತೆ ನಿವಾರಣೆ. ಕೌಟುಂಬಿಕ ನೆಮ್ಮದಿ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬಂದೀತು. ದೈಹಿಕ ನೋವು, ಜಡತ್ವ ಸಾಧ್ಯತೆ.
ಮಿಥುನ
ಉದ್ದೇಶಿಸಿದ್ದು ಇಂದು ಈಡೇರದು. ನಿರಾಶೆ ಬೇಡ. ಮರಳಿ ಯತ್ನವ ಮಾಡಿ. ವಿವಾಹ ಸಂಬಂಧದ ಪ್ರಯತ್ನ ಸಫಲತೆ ಕಾಣಲಿದೆ.
ಕಟಕ
ಅದೃಷ್ಟದ ದಿನ. ನಿರೀಕ್ಷಿಸಿದ ಬೆಳವಣಿಗೆ. ಹಣದ ಹೂಡಿಕೆ ಲಾಭ ತರಲಿದೆ. ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಸಿಗಲಿದೆ. ಧನಪ್ರಾಪ್ತಿ.
ಸಿಂಹ
ನಿಮ್ಮ ಗುರಿ ದೊಡ್ಡದು. ಆದರೆ ಸಾಧನೆ ಆಂಶಿಕ. ಆತ್ಮೀಯರ ಜತೆಗೆ ವಾಗ್ವಾದ ನಡೆದೀತು. ಸಮಾಧಾನದಿಂದ ವರ್ತಿಸಿ. ಆರ್ಥಿಕ ಒತ್ತಡ ಹೆಚ್ಚು.
ಕನ್ಯಾ
ಪ್ರತಿಕೂಲ ಪರಿಸ್ಥಿತಿ ಯನ್ನು ತಾಳ್ಮೆಯಿಂದ ನಿಭಾಯಿಸಿ. ಅಪರಾಹ್ನದ ನಂತರ ಎಲ್ಲ ಸುಲಲಿತ. ಬಂಧು, ಸ್ನೇಹಿತರ ಭೇಟಿ ಸಂತಸ ತರುವುದು.
ತುಲಾ
ಪ್ರಯಾಣ ಹೆಚ್ಚು. ಪ್ರಗತಿಯ ಯೋಜನೆಗೆ ಅಡ್ಡಿ. ಧಾರ್ಮಿಕ ವಿಚಾರದಲ್ಲಿ ಹೆಚ್ಚು ತೊಡಗುವಿರಿ. ಆರೋಗ್ಯಕ್ಕೆ ಗಮನ ಕೊಡಿ.
ವೃಶ್ಚಿಕ
ಉತ್ಸಾಹ, ಸಂಭ್ರಮದ ದಿನ. ಮನೆಯಲ್ಲಿ ಶುಭ ಸಮಾರಂಭ ಏಳಬಹುದು. ಕೌಟುಂಬಿಕ ಸಮಸ್ಯೆ ನಿವಾರಣೆ, ನಿರಾಳತೆ. ಆರ್ಥಿಕ ಸ್ಥಿತಿ ಸುಧಾರಣೆ.
ಧನು
ಯಾವುದೇ ವಿಚಾರ ನಿಭಾಯಿಸಲು ವಿಳಂಬ ಮಾಡಬೇಡಿ. ಕ್ಷಿಪ್ರವಾಗಿ ಕಾರ್ಯಾಚರಿಸಿ. ಕಿರಿಕಿರಿ ತರುವ ವ್ಯಕ್ತಿಯಿಂದ ಸಾಧ್ಯವಾದಷ್ಟು ದೂರವಿರಿ.
ಮಕರ
ಶುಭ ದಿನ. ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ಆರ್ಥಿಕ ಲಾಭ. ಬಡ್ತಿ ಸಾಧ್ಯತೆ ಉಜ್ವಲ.
ಕುಂಭ
ನಿಮ್ಮ ಕಾರ್ಯಕ್ಕೆ ಸೂಕ್ತ ಪ್ರತಿಫಲ ಸಿಗಲಿದೆ. ಹಿರಿಯರಿಗೆ ಸಂಧಿ ನೋವು ನಿವಾರಣೆ. ಮನೆಯಲ್ಲಿ ಹೆಚ್ಚು ಹೊಣೆಗಾರಿಕೆ. ದೈಹಿಕ ಬಸವಳಿಕೆ.
ಮೀನ
ನಿಮ್ಮ ಕ್ಷಿಪ್ರ ಪ್ರತಿಕ್ರಿಯೆ ಸಮಸ್ಯೆ ನಿವಾರಣೆಗೆ ನೆರವು ನೀಡಲಿದೆ. ಪ್ರಾಮಾಣಿಕತೆಗೆ ಸೂಕ್ತ ಮನ್ನಣೆ ಸಿಗಲಿದೆ. ಕೌಟುಂಬಿಕ ನೆಮ್ಮದಿ.



