ಹೊಸದಿಗಂತ ವರದಿ ಕೊಪ್ಪಳ:
ನಾನು ಪ್ರಜಾಸೇವಕ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿರುವುದೇ ತಪ್ಪು ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಿಡಿಕಾರಿದ್ದಾರೆ.
ಪ್ರಜಾಸೇವಾ ಅಭಿಯಾನದ ವೇಳೆ ‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ್ ಹೊರಟ್ಟಿ, ‘ಕೇವಲ ಬಾಯಿಮಾತಿನ ಘೋಷಣೆಗಳಿಂದ ಪ್ರಯೋಜನವಿಲ್ಲ, ಕೃತಿಯಲ್ಲಿ ಮಾಡಿ ತೋರಿಸಬೇಕು ಎಂದರು.
ಪ್ರಜಾಸೇವಕ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೆಳಗೆ ಕೂರುತ್ತಾರೆಯೇ ಎಂದು ಪ್ರಶ್ನಿಸಿದರು. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿರುವುದು ತಪ್ಪು’ ಎಂದು ಗುಡುಗಿದರು.



