Sunday, September 14, 2025

ಭಾರತ–ಪಾಕಿಸ್ತಾನ ಹೈವೋಲ್ಟೇಜ್‌ ಕದನ: ಟೀಂ ಇಂಡಿಯಾ ಟಾಸ್ ಸೋತರೂ ಬಯಸಿದ್ದೆ ಸಿಕ್ಕಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಕದನಕ್ಕೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಿದೆ. ಸೂಪರ್ ಫೋರ್ ಹಂತಕ್ಕೆ ಪ್ರವೇಶ ಪಡೆಯಲು ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಅಭಿಮಾನಿಗಳು ನಿರೀಕ್ಷಿಸಿರುವ ರೋಚಕ ಪಂದ್ಯದಲ್ಲಿ ಬಲಿಷ್ಠ ತಂಡಗಳೇ ಕಣಕ್ಕಿಳಿದಿವೆ.

ಇಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ 35ನೇ ಜನ್ಮದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಟೀಂ ಇಂಡಿಯಾ ಗೆಲುವಿನ ಮೂಲಕ ನಾಯಕರಿಗೆ ವಿಶೇಷ ಉಡುಗೊರೆ ನೀಡುವತ್ತ ಕಣ್ಣಿಟ್ಟಿದೆ. ಇದರಿಂದಲೇ ಇಂದಿನ ಪಂದ್ಯದ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ.

ಟಾಸ್ ವೇಳೆ ಅಚ್ಚರಿಯ ತಿರುವು ಕಂಡುಬಂದಿದೆ. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಸಾಮಾನ್ಯವಾಗಿ ದುಬೈ ಪಿಚ್‌ನಲ್ಲಿ ಟಾಸ್ ಗೆದ್ದ ನಾಯಕರು ಬೌಲಿಂಗ್ ಮಾಡುವುದೇ ಸೂಕ್ತ ಎಂದು ಪರಿಗಣಿಸುತ್ತಾರೆ. ಆದಾಗ್ಯೂ ಪಾಕ್ ನಾಯಕನ ನಿರ್ಧಾರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಟಾಸ್ ಸೋತ ಬಳಿಕ ಭಾರತೀಯ ನಾಯಕ ಸೂರ್ಯಕುಮಾರ್, “ನಾನು ಗೆದ್ದಿದ್ದರೆ ಖಂಡಿತಾ ಬೌಲಿಂಗ್ ಆಯ್ಕೆ ಮಾಡುತ್ತಿದ್ದೆ” ಎಂದು ಹೇಳಿದ್ದಾರೆ. ಹೀಗಾಗಿ ಇಬ್ಬರೂ ನಾಯಕರಿಗೆ ತಮಗೆ ಬೇಕಿದ್ದ ಆಯ್ಕೆಯೇ ಸಿಕ್ಕಂತಾಗಿದೆ.

ಇದನ್ನೂ ಓದಿ