September 11, 2026
Friday, September 11, 2026
spot_img

ಹಬ್ಬಕ್ಕೆ ಊರಿಗೆ ಹೊರಡೋಕೆ ತಯಾರಿ ಮಾಡ್ತಿದ್ದೀರಾ?: KSRTC ಕಡೆಯಿಂದ ಸಿಕ್ಕಿದೆ ಗುಡ್ ನ್ಯೂಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಸಾಲು ಸಾಲು ಹಬ್ಬಗಳು ಶುರುವಾಯಿತು ಬೆಂಗಳೂರು ಮಂದಿ ಊರಿನ ಕಡೆ ಮುಖ ಮಾಡೋಕೆ ಈಗಾಗ್ಲೇ ಶುರು ಮಾಡಿದ್ದಾರೆ. ಯಾವ ಬಸ್ ನೋಡಿದ್ರೂ ಪ್ರಯಾಣಿಕರ ದಟ್ಟಣೆ, ಫುಲ್ ರಶ್. ಅಷ್ಟೇ ಅಲ್ಲದೆ ಸತತ ರಜೆ ಇರೋದ್ರಿಂದ ಶುಕ್ರವಾರ ರಾತ್ರಿ ವೇಳೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

2,400 ವಿಶೇಷ ಬಸ್‌

ಈ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು KSRTC ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಒಟ್ಟು 2,400 ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. ಇದರ ಜತೆಗೆ 270 ಹೆಚ್ಚುವರಿ ರಿಸರ್ವೇಶನ್ ಬಸ್‌ಗಳನ್ನೂ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:

ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಬರುವವರಿಗೂ ಸ್ಪೆಶಲ್ ಬಸ್ ಇದೆ

ಇಷ್ಟೇ ಅಲ್ಲ ಹಬ್ಬ ಮುಗಿದ ವಾಪಾಸ್ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೂ KSRTC ವಿಶೇಷ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 14ರಿಂದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !