September 11, 2026
Friday, September 11, 2026
spot_img

ಮನೆ ಬೀಗ ಮುರಿದು ಟ್ರಜರಿಗೆ ಕನ್ನ ಹಾಕಿದ ಖದೀಮರು: ಬಂಗಾರ, ಬೆಳ್ಳಿ ಕಳವು

ಹೊಸದಿಗಂತ ವರದಿ ಮುಂಡಗೋಡ:

ಕಳ್ಳರು ಮನೆಯ ಬೀಗ‌ ಮುರಿರು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ನಡೆದಿದೆ.

ಟಿಬೆಟಿಯನ್ ಕ್ಯಾಂಪ್ ನಂ.4ರ ನವಾಂಗ್ ಟೆಂಡಪ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಸೆ. 8ರ ಮಧ್ಯಾಹ್ನ 3 ಗಂಟೆಯಿಂದ ಸೆಪ. 9ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ. ಮನೆಯ ಮುಂಭಾಗದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಮುರಿದ ಕಳ್ಳರು ಮನೆಯೊಳಗೆ ನುಗ್ಗಿ ಕೋಣೆಯಲ್ಲಿದ್ದ ಟ್ರಜರಿ ತೆರದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕೊಂಡೊಯ್ದಿದ್ದಾರೆ.

15 ಗ್ರಾಂ ತೂಕದ ಬಂಗಾರದ ಸರ, 25 ಗ್ರಾಂ ತೂಕದ ಬಂಗಾರದ ಬಿಸ್ಕೆಟ್ ಚೈನ್, ಏಳು ಬಳೆಗಳು ಹಾಗೂ ಒಂದು ಬೆಳ್ಳಿಯ ದೀಪ ಸೇರಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು 4.60 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳತನದ ಕುರಿತು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !