ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆದ ACC ಪುರುಷರ ಪ್ರೀಮಿಯರ್ ಕಪ್ ಫೈನಲ್‌ನಲ್ಲಿ ಯುಎಇ ತಂಡವನ್ನು 44 ರನ್‌ಗಳಿಂದ ಮಣಿಸಿದ ನೇಪಾಳ, 2027ರ ಏಕದಿನ ಏಷ್ಯಾಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಪ್ರೀಮಿಯರ್ ಕಪ್‌ನಲ್ಲಿ ನೇಪಾಳ ತಂಡ ಚಾಂಪಿಯನ್ ಆಗುತ್ತಿರುವುದು ಇದು ಎರಡನೇ ಬಾರಿ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 313 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕ ಬ್ಯಾಟರ್ ಆಸಿಫ್ ಶೇಖ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ:
ಏಕದಿನ ಏಷ್ಯಾಕಪ್ ನ 6 ಟೀಮ್ ಯಾವ್ದು?
ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಆತಿಥೇಯ ಬಾಂಗ್ಲಾದೇಶಗಳು ಪಂದ್ಯಾವಳಿಗೆ ನೇರ ಪ್ರವೇಶವನ್ನು ಪಡೆದಿದ್ದು, 6ನೇ ತಂಡವಾಗಿ ನೇಪಾಳವೂ ಎಂಟ್ರಿಕೊಟ್ಟಿದೆ.
ಈ ಗೆಲುವಿನೊಂದಿಗೆ ನೇಪಾಳ 2027ರ ಏಕದಿನ ಏಷ್ಯಾಕಪ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಬಾಂಗ್ಲಾದೇಶದಲ್ಲಿ 2027ರ ಮಧ್ಯಭಾಗದಲ್ಲಿ ಟೂರ್ನಿ ನಡೆಯುವ ನಿರೀಕ್ಷೆಯಿದೆ.



