ಹೊಸದಿಗಂತ ವರದಿ ಬೆಳಗಾವಿ:
“ಇ.ಡಿ ತನ್ನ ಕೆಲಸಾನ ತಾನು ಮಾಡ್ತಿರೋ ಸ್ವತಂತ್ರ ಸಂಸ್ಥೆ, ಅದರ ದಾಳಿ ಬಗ್ಗೆ ನಮಗಂತೂ ಯಾವ ಗೊಂದಲವೂ ಇಲ್ಲ” ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಕೊಟ್ಟಿದ್ದಾರೆ.
“ದಾಳಿ ಆದಾಗಿನಿಂದ ನಾನು ಮೀಡಿಯಾ ಮುಂದೆ ಬಂದು 3-4 ಬಾರಿ ಎಲ್ಲ ವಿಚಾರ ಸ್ಪಷ್ಟವಾಗಿ ಹೇಳಿದ್ದೀನಿ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಆದ್ರೂ ಕೆಲವರು ನಾನು ಇ.ಡಿ ಗೆ ಚಾಲೆಂಜ್ ಹಾಕಿದ್ದೀನಿ ಎಂದು ತಮಗೆ ಬೇಕಾದಂಗೆ ಸುದ್ದಿ ಹಬ್ಬಿಸ್ತಿದ್ದಾರೆ. ನಾನ್ಯಾಕೆ ಅವ್ರಿಗೆ ಸವಾಲು ಹಾಕಲಿ?” ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ತನಿಖೆ ನಡೀತಿರೋ ಈ ಟೈಮ್ನಲ್ಲಿ ಜನರ ಮೈಂಡ್ ಡೈವರ್ಟ್ ಮಾಡೋ, ಗೊಂದಲ ಹುಟ್ಟುಹಾಕೋ ತರಹದ ಫೇಕ್ ನ್ಯೂಸ್ಗಳನ್ನು ಪಬ್ಲಿಶ್ ಮಾಡ್ಬೇಡಿ ಎಂದು ಸಚಿವರು ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾರೆ.



