ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಲ್ಲಿವರೆಗೆ ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಗೃಹಜ್ಯೋತಿ ಯೋಜನೆಯಡಿ ಝೀರೋ ಕರೆಂಟ್ ಬಿಲ್ ಬರ್ತಿತ್ತು. ಆದರೆ ಈ ತಿಂಗಳ ಕರೆಂಟ್ ಬಿಲ್ ನೋಡಿ ಜನ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕಾರಣ ಏನು ಅಂತ ನೀವೇ ನೋಡಿ.
ಝೀರೋದಿಂದ ಸಾವಿರಾರು ರೂಪಾಯಿ
ಇಲ್ಲಿಯ ವರೆಗೆ ಝೀರೋ ಎಂದು ಕರೆಂಟ್ ಬಿಲ್ ನಲ್ಲಿ ಬರುತ್ತಿದ ಸಂಖ್ಯೆ ಒಮ್ಮೆಗೆ ಸಾವಿರಾರು ರೂಪಾಯಿಗಳಿಗೆ ಏರಿಕೆಯಾಗಿರೋದನ್ನು ಕಂಡು ಬೆಂಗಳೂರು ಮಂದಿ ಆತಂಕಕ್ಕೀಡಾಗಿದ್ದರೆ. ಯಾವುದೇ ಮುನ್ಸೂಚನೆಯಿಲ್ಲದೆ 4 ಸಾವಿರ, 5 ಸಾವಿರದ ಕರೆಂಟ್ ಬಿಲ್ ಗಳು ಮನೆ ಬಾಗಿಲಿಗೆ ಬಂದು ತಲುಪಿವೆ.
ಇದನ್ನೂ ಓದಿ:
ಒಂದೇ ತಿಂಗಳಲ್ಲಿ ಇಷ್ಟೊಂದು ಮೊತ್ತ
ಶಿವಾಜಿನಗರ ಕ್ಷೇತ್ರದ ಮಖಾನ್ ಕಾಂಪೌಂಡ್ ಪ್ರದೇಶದಲ್ಲಿ ಹಲವು ಮನೆಗಳಿಗೆ ಇದೇ ರೀತಿಯ ಬಿಲ್ ಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಒಂದೇ ತಿಂಗಳಲ್ಲಿ ಇಷ್ಟೊಂದು ದೊಡ್ಡ ಬಿಲ್ ಬರೋದಕ್ಕೆ ಕಾರಣವೇನು ಅಂತ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ವಿಶೇಷ ಅಂದ್ರೆ, ಈ ರೀತಿ ಬಿಲ್ ಬಂದಿರೋದು ಇದೇ ಮೊದಲ ಸಲ ಅಲ್ಲ, ಕಳೆದ ತಿಂಗಳು ಕೂಡ ಮಖಾನ್ ಕಾಂಪೌಂಡ್ ಪ್ರದೇಶದ ಕೆಲವು ಮನೆಗಳಿಗೆ ಇದೇ ರೀತಿಯ ಸಾವಿರಾರು ರೂಪಾಯಿಯ ಬಿಲ್ ಬಂದಿದಿತ್ತು. ಆಗ ಬೆಸ್ಕಾಂ ಸಿಬ್ಬಂದಿ ತಾಂತ್ರಿಕ ದೋಷದಿಂದ ತಪ್ಪಾದ ಬಿಲ್ ಸೃಷ್ಟಿಯಾಗಿದೆ ಎಂದು ಗ್ರಾಹಕರಿಗೆ ಸಮಜಾಯಿಷಿ ಕೊಟ್ಟಿದ್ದರು.
ಆದ್ರೆ ಈಗ ಮತ್ತೆ ಇದೇ ರೀತಿ ಬಿಲ್‌ಗಳು ಬಂದಿರೋದು ನಿವಾಸಿಗಳ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.



