ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಭೆಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರಿಗೆ ಆಗಮಿಸಿದ್ದಾರೆ.
ಇಂದು ಬೆಳಗ್ಗೆ ಮಂಗಳೂರಿನ ಗಾಂಧಿ ಸ್ಕ್ವೇರ್ ಕೆಫೆಗೆ ಡಿಕೆಶಿ ಭೇಟಿ ನೀಡಿದ್ದು, ತಿಂಡಿ, ಹೊಟೇಲ್ ಹಾಗೂ ಕಂಪನಿ ಎಲ್ಲವೂ ನನಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. 1934ರಲ್ಲಿ ಮಹಾತ್ಮಾ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಕೆಫೆಗೆ ಗಾಂಧಿ ಸ್ಕ್ವೇರ್ ಕೆಫೆ ಎಂದು ಹೆಸರಿಟ್ಟಿದ್ದಾರೆ. ನಮ್ಮ ರಾಜ್ಯದ ಯುವ ಮನಸ್ಸುಗಳ ಜೊತೆ ಕುಳಿತು ಉಪಹಾರ ಸವಿದಿದ್ದೇನೆ, ನನ್ನ ದಿನ ಹೀಗೆ ಆರಂಭವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ನಮ್ಮ ಕುಡ್ಲದ ಉತ್ಸಾಹಿ ಮನಸ್ಸು ಗಳನ್ನು ಭೇಟಿ ಮಾಡಿದೆ. ಇವರಲ್ಲಿ ದೊಡ್ಡ ಕನಸುಗಳು ಹಾಗೂ ಸ್ಪಷ್ಟ ಅಭಿರುಚಿ ಇದೆ. ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಯುವ ಮನಸ್ಸುಗಳ ಜತೆ ಮಾತುಕತೆ ಮಾಡಿದ್ದಕ್ಕೆ ಅವರ ದೃಷ್ಟಿಕೋನ ಹೇಗಿದೆ ಅನ್ನೋದು ಅರ್ಥವಾಯ್ತು. ಮಂಗಳೂರಿಗರು ಕನಸ್ಸು ಕಾಣುವವರು, ಕಂಡು ಅದನ್ನು ನನಸು ಮಾಡಿಕೊಳ್ಳುವವರು ಎಂದು ಹೊಗಳಿದ್ದಾರೆ.
ಮಂಗಳೂರಿಗೆ ಬಂದ ಮೇಲೆ ಬನ್ಸ್, ಗೋಳಿಬಜೆ, ಶ್ಯಾವಿಗೆ ರಸಾಯನ ತಿಂದಿಲ್ಲ ಎಂದರೆ ಹೇಗೆ? ತಾಜಾ ಸಂಭಾಷನೆಗಳು, ಪರಿಚಿತ ಫ್ಲೇವರ್ಸ್ನ ಜೊತೆ ಅದ್ಭುತ ದಿನ ಆರಂಭವಾಗಲಿ ಎಂದು ಹೇಳಿದ್ದಾರೆ.



