ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂದಮೇಲೆ ಗಾಸಿಪ್, ಟ್ರೋಲ್ಸ್ ಇದ್ದೇ ಇರುತ್ತೆ. ಆದರೆ ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಜನ ಲಿಮಿಟ್ಸ್ ಮೀರಿ ಬಿಡ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಂಬಾನಿ ಮನೆಯ ಗಣಪತಿ ಪೂಜೆಗೆ ನಟಿ ಕತ್ರಿನಾ ಕೈಫ್ ಬಂದಾಗಲೂ ಅದೇ ಆಯ್ತು. ಕಳೆದ ವರ್ಷ ನವೆಂಬರ್ 2025ರಲ್ಲಿ ಕತ್ರಿನಾ ‘ವಿಹಾನ್’ ಎಂಬ ಮುದ್ದಾದ ಗಂಡು ಮಗುವಿಗೆ ತಾಯಿಯಾಗಿದ್ದರು. ಮಗುವಾಗಿ ವರ್ಷ ಕೂಡ ಮುಗಿದಿಲ್ಲ, ಆಗಲೇ ಅವರ ಪೋಸ್ಟ್ ಪ್ರೆಗ್ನೆನ್ಸಿ ವೇಟ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಗೇಲಿ ಮಾಡಲು ಶುರುಮಾಡಿದ್ದರು.
ಆದರೆ ಈ ವಿಚಾರ ಬಾಲಿವುಡ್ ‘ಟೈಗರ್’ ಸಲ್ಮಾನ್ ಖಾನ್ ಕಣ್ಣಿಗೆ ಬೀಳದೇ ಇರುತ್ತಾ? ‘ಬಿಗ್ ಬಾಸ್’ ವೀಕೆಂಡ್ ಕಾ ವಾರ್ ಎಪಿಸೋಡ್ನಲ್ಲಿ ಸಲ್ಮಾನ್ ಖಾನ್ ಈ ಟ್ರೋಲರ್ಗಳನ್ನು ಹಿಡಿದು ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ.
ಎಪಿಸೋಡ್ನಲ್ಲಿ ಸಲ್ಮಾನ್ ಎಲ್ಲೂ ಕತ್ರಿನಾ ಹೆಸರು ಎತ್ತಲಿಲ್ಲ. ಆದರೆ ಅವರು ಹೇಳಿದ ಮಾತುಗಳು ಯಾರಿಗೆ ತಲುಪಬೇಕೋ ಅವರಿಗೆ ಸರಿಯಾಗಿ ನಾಟಿವೆ. “ಮಗು ಹೆತ್ತಮೇಲೆ ಯಾವುದೇ ಹೆಣ್ಣಿಗಾದರೂ ತೂಕ ಹೆಚ್ಚಾಗೋದು ಸಹಜ ಅಲ್ವಾ? ಮತ್ತೆ ಸಿನಿಮಾಗಳಿಗೆ ಬರುವಾಗ ಅವರು ಫಿಟ್ ಆಗ್ತಾರೆ. ಈಗ ಅವರಿಗೆ ಫ್ಯಾಮಿಲಿ ಜೊತೆ ಟೈಮ್ ಕಳೆಯೋಕೆ ಬಿಡಿ. ಹೆರಿಗೆಯಾದ ಹೆಣ್ಣಿನ ಬಗ್ಗೆ, ಅವರ ದೇಹದ ಬಗ್ಗೆ ಟ್ರೋಲ್ ಮಾಡೋಕೆ ನಿಮಗೇನು ಹಕ್ಕಿದೆ?” ಎಂದು ಸಲ್ಮಾನ್ ಕೆಂಡಮಂಡಲವಾದರು.
ಇಷ್ಟಕ್ಕೇ ನಿಲ್ಲಿಸದ ಸಲ್ಮಾನ್, ನಟಿಯರ ಹಿಂಬದಿಯಿಂದ ಅನಗತ್ಯವಾಗಿ ಫೋಟೋ-ವೀಡಿಯೋ ತೆಗೆಯುವವರ ಮೇಲೆಯೂ ಗರಂ ಆದರು. “ಇದೆಲ್ಲಾ ಕೆಟ್ಟ ಮನಸ್ಥಿತಿ” ಎಂದು ತರಾಟೆಗೆ ತೆಗೆದುಕೊಂಡರು.
ಸಲ್ಮಾನ್ ಖಾನ್ ಈ ರೀತಿ ಟ್ರೋಲರ್ಗಳಿಗೆ ಚಾಟಿ ಬೀಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಅಭಿಮಾನಿಗಳು ಸಲ್ಮಾನ್ ಖಾನ್ ಅವರ ಈ ಗುಣಕ್ಕೆ ಶಹಬ್ಬಾಸ್ ಎನ್ನುತ್ತಿದ್ದಾರೆ.



