September 20, 2026
Sunday, September 20, 2026
spot_img

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ವಿಧಿವಶ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಧ್ಯಮ ಲೋಕದ ಹಿರಿಯ ಪತ್ರಕರ್ತೆಯಾಗಿದ್ದ ಪಾಯಲ್ ಮೆಹ್ತಾ ಅವರು ಭಾನುವಾರ ಮುಂಜಾನೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಯಲ್, ರಾಜಕೀಯ ಹಾಗೂ ಸಂಸತ್ತಿನ ವಿದ್ಯಮಾನಗಳನ್ನು ಅತ್ಯಂತ ನಿಖರವಾಗಿ ವರದಿ ಮಾಡುವ ಮೂಲಕ ಹೆಸರುವಾಸಿಯಾಗಿದ್ದರು.

ಮುಂಬೈ ಪ್ರವಾಸದಲ್ಲಿದ್ದಾಗ ಅಸ್ವಸ್ಥ

ಕೆಲಸದ ನಿಮಿತ್ತ ಮುಂಬೈಗೆ ಭೇಟಿ ನೀಡಿದ್ದ ಪಾಯಲ್ ಮೆಹ್ತಾ ಅವರಿಗೆ ಭಾನುವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಹಠಾತ್ತಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಆರಂಭವಾಗುವ ಮುನ್ನವೇ ಅವರ ಮೃತಪಟ್ಟಿದ್ದರು ಎಂದು ಅವರ ಸಹೋದ್ಯೋಗಿ ಶೀಲಾ ಭಟ್ ತಿಳಿಸಿದ್ದಾರೆ.

ದೇಶದ ಗಣ್ಯರಿಂದ ಸಂತಾಪ

ಪಾಯಲ್ ಮೆಹ್ತಾ ಅವರ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ದೇಶದ ಹಲವು ಪ್ರಮುಖ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಅವರುಪಾಯಲ್ ಮೆಹ್ತಾ ಅವರ ನಿಧನಕ್ಕೆಸಂತಾಪ ಸೂಚಿಸಿದ್ದಾರೆ. ಈ ಬಗ್ಗೆಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು,”ಪಾಯಲ್ ಮೆಹ್ತಾ ಅತ್ಯಂತ ಶ್ರಮಜೀವಿ ಪತ್ರಕರ್ತೆಯಾಗಿದ್ದರು. ದೇಶದ ಪ್ರಮುಖ ವಿಚಾರಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿತ್ತು. ಅವರ ಸಜ್ಜನಿಕೆ ಮತ್ತು ಪ್ರೀತಿಯ ಸ್ವಭಾವವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಇಷ್ಟು ಚಿಕ್ಕ ವಯಸ್ಸಿಗೆ ಅವರು ಅಗಲಿರುವುದು ತೀವ್ರ ಬೇಸರ ತಂದಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಅಮಿತ್ ಶಾ ಅವರು, “ಪಾಯಲ್ ತಮ್ಮ ವೃತ್ತಿಬದುಕಿನಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.

ಸಂಸತ್ತಿನ ಅಧಿವೇಶನಗಳ ಸಂದರ್ಭದಲ್ಲಿ ಮುಂಜಾನೆಯಿಂದ ತಡರಾತ್ರಿಯವರೆಗೆ ನಿಂತು ವರದಿ ಮಾಡುತ್ತಿದ್ದ ಪಾಯಲ್ ಅವರ ಶ್ರದ್ಧೆಯನ್ನು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಕಿರಣ್ ರಿಜಿಜು ಅವರೂ ಕೂಡ ನೆನೆದು ಕಣ್ಣೀರಿಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರ ತಂದೆಯ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಈಗ ಮಗಳು ಕೂಡ ಇಲ್ಲವಾಗಿರುವುದು ಅವರ ಇಡೀ ಕುಟುಂಬವನ್ನು ಮತ್ತಷ್ಟು ಕುಗ್ಗಿಸಿದೆ.

ಇದನ್ನೂ ಓದಿ:

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !