ಹೊಸದಿಗಂತ ವರದಿ ವಿಜಯಪುರ:
ಕ್ರೇನ್‌ಗೆ ನೇಣು ಬೀಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ನಗರದ ಹೊರ ವಲಯ ದರ್ಗಾ ಬಳಿಯ ರಿಂಗ್‌ರೋಡ್ ಬಳಿ ನಡೆದಿದೆ.
ಮೃತಪಟ್ಟವನನ್ನು ಆಕಾಶ ಪಾಟೀಲ (22) ಎಂದು ಗುರುತಿಸಲಾಗಿದೆ. ಅನುಮಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಇದು ಕೊಲೆಯೋ ? ಅಥವಾ ಆತ್ಮಹತ್ಯೆಯೋ ? ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



