September 20, 2026
Sunday, September 20, 2026
spot_img

ಕ್ಷುಲ್ಲಕ ಜಗಳಕ್ಕೆ ಗುಂಡಿನ ಸದ್ದು: ಪೆಟ್ರೋಲ್ ಬಂಕ್ ಮಾಲೀಕನಿಂದ ಇಬ್ಬರ ಮೇಲೆ ಫೈರಿಂಗ್

ಹೊಸದಿಗಂತ ವರದಿ ವಿಜಯಪುರ:

ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ ಮಾಲೀಕನಿಂದ ಇಬ್ಬರ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಸುಖದೇವ ಚಲವಾದಿ (30), ರಾಜು ಚಲವಾದಿ (40) ಗಾಯಗೊಂಡವರು.

ಆರೋಪಿ ಸಂಗಪ್ಪ ಪೂಜಾರಿ ಎಂಬವರ ಪೆಟ್ರೋಲ್ ಬಂಕ್ ಗೆ ಸುಖದೇವ ಚಲವಾದಿ, ರಾಜು ಚಲವಾದಿ ತೆರಳಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ಸಂದರ್ಭ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ ತನ್ನ ಪರವಾನಿಗೆ ಹೊಂದಿದ ಪಿಸ್ತೂಲ್ ನಿಂದ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ.

ಈ ಘಟನೆಯಲ್ಲಿ ಸುಖದೇವ ಎಂಬವನಿಗೆ ಗಂಭೀರ ಗಾಯವಾಗಿದ್ದು, ರಾಜು ಎಂಬವನಿಗೆ ಸಣ್ಣ, ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !