September 26, 2026
Saturday, September 26, 2026
spot_img

ಕಡಲತೀರಕ್ಕೆ ‘ಹಾರಿ’ ಬಂತು ರಾಶಿ ರಾಶಿ ಬೂತಾಯಿ ಮೀನು: ಕೈಚೀಲ, ಬಕೆಟ್ ಜೊತೆ ಸಂಗ್ರಹಿಸಲು ಮುಗಿಬಿದ್ದ ಮೀನು ಪ್ರಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಂ.ಕೋಡಿ ಕಡಲತೀರದಲ್ಲಿ ಶನಿವಾರ ಬೂತಾಯಿ ತಳಿಯ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿದ್ದು, ಮೀನು ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಸಿತು.


ಸುದ್ದಿ ತಿಳಿಯುತ್ತಲೇ ಮೀನುಗಳನ್ನು ಸಂಗ್ರಹಿಸಲು ನೂರಾರು ಮಂದಿ ಕಡಲತೀರಕ್ಕೆ ಆಗಮಿಸಿದರು. ಸಮುದ್ರದ ಅಲೆಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ದಡಕ್ಕೆ ಬಂದ ಬೂತಾಯಿ ಮೀನುಗಳನ್ನು ಕಂಡ ಸ್ಥಳೀಯ ನಿವಾಸಿಗಳು ಸೇರಿದಂತೆ ಹಲವರು ತಕ್ಷಣವೇ ಕಡಲತೀರದತ್ತ ಧಾವಿಸಿದರು. ಕೆಲವರು ಕೈಚೀಲಗಳನ್ನು ತಂದಿದ್ದರೆ, ಇನ್ನೂ ಕೆಲವರು ಬಕೆಟ್ ಸೇರಿದಂತೆ ಸಿಕ್ಕ ಸಿಕ್ಕ ಪಾತ್ರೆಗಳನ್ನು ಬಳಸಿ ದಡದಲ್ಲಿ ಬಿದ್ದಿದ್ದ ಮೀನುಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂತು.


ಬೆಳಗ್ಗೆಯೇ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ದಡಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲವೇ ಸಮಯದಲ್ಲಿ ಕಡಲತೀರದಲ್ಲಿ ಜನಸಂದಣಿ ಹೆಚ್ಚಾಯಿತು. ಸಮುದ್ರದ ಅಲೆಗಳೊಂದಿಗೆ ಮೀನುಗಳು ದಡದತ್ತ ಬಂದು ಬೀಳುತ್ತಿದ್ದ ದೃಶ್ಯವೂ ಕಂಡುಬಂದಿದೆ. ಈ ದೃಶ್ಯಾವಳಿಗಳು ಜಾಲತಾಣಗಲ್ಲಿ ಸಡ್ಡು ಮಾಡುತ್ತಿದೆ.

Must Read