ಮೇಷ
ದೈನಂದಿನ ಕಾರ್ಯಕ್ಕೆ ಅಡ್ಡಿ. ಕೆಲವು ಬೆಳವಣಿಗೆ ಉದ್ವಿಗ್ನತೆ ಹೆಚ್ಚಿಸಲಿದೆ. ಹಣಕ್ಕೆ ಸಂಬಂಧಿಸಿ ತೃಪ್ತಿಕರ ಪರಿಸ್ಥಿತಿ. ಪ್ರೀತಿಯ ವಿಚಾರದಲ್ಲಿ ಅಸಮಾಧಾನ.
ವೃಷಭ
ಕಿಷ್ಟಕರ ಸನ್ನಿವೇಶ. ತಾಳ್ಮೆಯ ನಡೆ ಅವಶ್ಯ. ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆರೋಗ್ಯ ಸಮಸ್ಯೆ ಕಾಡಬಹುದು. ಹಲ್ಲು ಅಥವಾ ಕಣ್ಣಿನ ಕಿರಿಕಿರಿ.
ಮಿಥುನ
ವೃತ್ತಿಯಲ್ಲಿ ಹೊಸ ಸವಾಲು ಎದುರಿಸುವಿರಿ. ನಿಮ್ಮ ಕಾರ್ಯ ಕೆಲವರಿಗೆ ತೃಪ್ತಿ ತಾರದು. ದಿನದ ಅಂತ್ಯಕ್ಕೆ ನಿಮ್ಮ ಒತ್ತಡ ನಿವಾರಣೆ, ನಿರಾಳತೆ!
ಕಟಕ
ಕೆಲವು ಉಲ್ಲಾಸದ ಕ್ಷಣ ಅನುಭವಿಸುವಿರಿ. ಆತ್ಮೀಯ ಸಂಬಂಧ ವೊಂದು ಹೊಸ ಆಯಾಮ ಪಡೆದೀತು. ಆರ್ಥಿಕ ಸ್ಥಿರತೆ.
ಸಿಂಹ
ಅಹಿತಕರ ಪ್ರಸಂಗ ಎದುರಿಸುವಿರಿ. ಮೌಲಿಕ ವಸ್ತು ಕಳೆದುಹೋದೀತು. ಅನಿರೀಕ್ಷಿತ ಖರ್ಚು ಒದಗಲಿದೆ. ಬಂಧುಗಳ ಜತೆ ವಿರಸ, ವಾಗ್ವಾದ.
ಕನ್ಯಾ
ಹರ್ಷದ ಕ್ಷಣಗಳು ಇಂದು ಸಿಗಲಾರವು. ಮನಸ್ಸಿನ ಶಾಂತಿ ಹಾಳು. ಉದ್ವಿಗ್ನತೆ ಅಧಿಕ. ಉದ್ಯಮಿಗಳು ಯೋಚಿಸಿ ನಿರ್ಧಾರ ತಾಳಬೇಕು.
ತುಲಾ
ಫಲಪ್ರದ ದಿನ. ನಿಮಗೆ ಪೂರಕ ಸನ್ನಿವೇಶ ಸೃಷ್ಟಿ. ಖರ್ಚು ಹಿಡಿತಕ್ಕೆ ಬರಲಿದೆ. ಕೌಟುಂಬಿಕ ವಿರಸ ಅಂತ್ಯ. ವೃತ್ತಿಯಲ್ಲಿ ಉನ್ನತಿ, ಧನಾಗಮ.
ವೃಶ್ಚಿಕ
ಕಾರ್ಯಸಾಧನೆ ಕಠಿಣವಾದೀತು. ಒತ್ತಡ ಅಧಿಕ. ನಿರಾಳ ಮನಸಿಂದ ಕಾರ್ಯವೆಸಗಿ. ಅನಿರೀಕ್ಷಿತ ಧನಲಾಭ. ಸಂಗಾತಿ ಜತೆ ಮಾತಿನ ಚಕಮಕಿ.
ಧನು
ಈ ದಿನ ದೊಡ್ಡ ಯಶಸ್ಸು ನಿರೀಕ್ಷಿಸಬೇಡಿ. ಸಾಧಾರಣ ಸಫಲತೆ. ಹಣದ ವಿಚಾರದಲ್ಲಿ ಹಿನ್ನಡೆ ಉಂಟಾದೀತು. ಕೌಟುಂಬಿಕ ಅಸಮಾಧಾನ.
ಮಕರ
ಪ್ರಗತಿಪರ ದಿನ. ಕುಟುಂಬ ಸದಸ್ಯರ ಜತೆ ಕಾಲಕ್ಷೇಪ. ಆರೋಗ್ಯ ಸ್ಥಿರ. ವೃತ್ತಿ ಸಮಸ್ಯೆಯೊಂದು ಕೊನೆಗೂ ಪರಿಹಾರ. ಮಾನಸಿಕ ನಿರಾಳತೆ.
ಕುಂಭ
ನೀವು ಬಯಸಿದ ಫಲ ಸಿಗದು. ನಿರಾಶೆ. ಮನದಲ್ಲಿ ಗೊಂದಲ. ಹಣದ ಕೊರತೆ ಕಾಡಲಿದೆ. ಆಪ್ತರಿಂದ ಅಪೇಕ್ಷಿತ ನೆರವೂ ಸಿಗಲಾರದು.
ಮೀನ
ಹೆಚ್ಚು ಕ್ರಿಯಾಶೀಲತೆ ಇಲ್ಲದ ದಿನ. ಮುಖ್ಯ ಕೆಲಸ ಆರಂಭಿಸುವ ಮುನ್ನ ಸರಿಯಾಗಿ ಯೋಚಿಸಿ. ಸಂಗಾತಿ ಸಲಹೆ ಸಮಸ್ಯೆ ಪರಿಹಾರಕ್ಕೆ ನೆರವಾದೀತು.



