ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಿನ್ನೆ ತಡರಾತ್ರಿ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ರಾಜ್ಯದಲ್ಲಿ ಬರ, ಮಳೆ ಪರಿಸ್ಥಿತಿ ಮಧ್ಯೆ ಭೂಕಂಪವೂ ಸಂಭವಿಸಿದ್ದು, ವಿಜಯನಗರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜನ ಬೆಚ್ಚಿಬಿದ್ದಿದ್ದಾರೆ. ನಡುರಾತ್ರಿ ಭೂಮಿ ಅಲುಗಾಡಿದ ನಂತರ ಹೆದರಿದ ಜನ ಮನೆಯಿಂದ ಹೊರಕ್ಕೆ ಮಕ್ಕಳನ್ನು ಎತ್ತಿಕೊಂಡು ಓಡಿ ಬಂದಿದ್ದಾರೆ.
ತಡರಾತ್ರಿ ಎರಡು ಗಂಟೆ ನಾಲ್ಕು ನಿಮಿಷದ ಸುಮಾರಿಗೆ ಬಸವನಬಾಗೇವಾಡಿ ಜನ ಡೀಪ್ ನಿದ್ದೆಯಲ್ಲಿದ್ದರು. ಈ ವೇಳೆ ಭೂಮಿ ಕಂಪಿಸಿದೆ. ನಿದ್ದೆಯಿಂದ ಎದ್ದ ಜನ ಒಂದು ಕ್ಷಣ ಏನೂ ಅರಿಯದೇ ಹೋದರೂ ಮಕ್ಕಳನ್ನು ಎತ್ತಿಕೊಂಡು, ವಯಸ್ಸಾದವರನ್ನು ಕರೆದುಕೊಂಡು ಹೊರಕ್ಕೆ ಬಂದಿದ್ದಾರೆ.
ಎಲ್ಲವೂ ಪರಿಸ್ಥಿತಿಯ ಬಗ್ಗೆ ಹೆದರಿದ್ದು, ಬಸವನ ಬಾಗೇವಾಡಿ ಸುತ್ತಮುತ್ತ ಕಂಪನದ ಅನುಭವ ಆಗಿದ್ದು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಮುನ್ನಚ್ಚರಿಕೆಗೆ ಜಿಲ್ಲಾಡಳಿತಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಸೂಚನೆ ನೀಡಿದೆ.



