October 1, 2026
Thursday, October 1, 2026
spot_img

ವಾಣಿಜ್ಯ ಬಳಕೆ ಎಲ್‌ಪಿಜಿ ದರ ಹಠಾತ್ ಏರಿಕೆ: ತಿಂಗಳಾರಂಭಕ್ಕೆ ಗ್ರಾಹಕರಿಗೆ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿಂಗಳ ಆರಂಭಕ್ಕೆ ಗ್ರಾಹಕರಿಗೆ ಶಾಕ್‌ ಆಗಿದ್ದು, ವಾಣಿಜ್ಯ ಬಳಕೆ ಎಲ್‌ಪಿಜಿ ದರ ಬರೋಬ್ಬರಿ 62.50 ರೂಪಾಯಿಯಷ್ಟು ಏರಿಕೆ ಆಗಿದೆ. ಹಬ್ಬದ ಸೀಸನ್‌ಗೂ ಮುನ್ನ ಹೊಟೇಲ್‌, ರೆಸ್ಟೋರೆಂಟ್‌ ಹಾಗೂ ಡಾಬಾಗಳಿಗೆ ಶಾಕ್‌ ಆಗಿದ್ದು, ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಹೊಟೇಲ್‌ಗಳಲ್ಲಿ ಊಟ ತಿಂಡಿಯ ದರ ಏರಿಕೆಯಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 62.50 ರೂ.ಗಳಷ್ಟು ಏರಿಕೆಯಾಗಿ 2,810 ರೂ. ತಲುಪಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ 2,747.50 ರೂಪಾಯಿಗಳಷ್ಟಿತ್ತು. ಇಂದಿನಿಂದಲೇ ಹೊಸ ದರ ಜಾರಿಯಾಗಲಿದ್ದು, ಗೃಹಬಳಕೆ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Must Read