ಮೇಷ
ವೃತ್ತಿಯಲ್ಲಿ ಹೆಚ್ಚು ಎಚ್ಚರದಿಂದ ಕಾರ್ಯ ನಿರ್ವಹಿಸಿ. ಗಮನ ಬೇರೆಡೆ ಹರಿಯದಿರಲಿ. ಸಾಂಸಾರಿಕ ಬಂಧ ಕಾಪಾಡಲು ಆದ್ಯತೆ ಕೊಡಿ.
ವೃಷಭ
ಖಾಸಗಿ ಬದುಕಿನ ಸಮಸ್ಯೆ ಪರಿಹರಿಸಲು ಗಮನ ಕೊಡಿ. ಅದನ್ನು ಹಾಗೇ ಬಿಡಬೇಡಿ. ಕೆಲವರಿಗೆ ಚರ್ಮದ ಅಲರ್ಜಿ ಕಾಣಿಸಿಕೊಂಡೀತು. ಅದೃಷ್ಟ ಬದಲಾಗುವುದು, ತಾಳ್ಮೆ ಇರಲಿ
ಮಿಥುನ
ಆರ್ಥಿಕ ಸ್ಥಿರತೆ. ಹಾಗಾಗಿ ಹಣದ ಕುರಿತಾದ ಚಿಂತೆ ಪರಿಹಾರ. ನಿಮ್ಮ ಪಾಲಿಗೆ ವಿಶೇಷವೆನ್ನಿಸಿದ ವ್ಯಕ್ತಿಯ ಭೇಟಿ. ಬಾಂಧವ್ಯ ವೃದ್ಧಿ.
ಕಟಕ
ಶಾಂತಚಿತ್ತರಾಗಿ ಪರಿಸ್ಥಿತಿ ಎದುರಿಸಿ. ಏಕೆಂದರೆ ಪ್ರತಿಕೂಲ ಪ್ರಸಂಗ ಎದುರಾದೀತು. ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಲಭ್ಯ.
ಸಿಂಹ
ಹಿರಿಯರ ಜತೆ ಸೌಹಾರ್ದ ಸಂಬಂಧ ಉಳಿಸಿಕೊಳ್ಳಿ. ಅವರನ್ನು ಕಡೆಗಣಿಸದಿರಿ. ದೈಹಿಕ ನೋವು ಬಾಽಸಬಹುದು. ವಿರಾಮ ಪಡೆಯಿರಿ.
ಕನ್ಯಾ
ಎಲ್ಲರಿಂದ ಮೆಚ್ಚುಗೆ ಪಡೆಯಲು ನಿಮ್ಮ ಸ್ವಭಾವದಲ್ಲಿ ಬದಲಾವಣೆ ತನ್ನಿ. ನಿಮ್ಮ ಸಮಸ್ಯೆಗೆ ಅನ್ಯರನ್ನು ದೂರಬೇಡಿ. ಹೊಂದಾಣಿಕೆ ಇರಲಿ.
ತುಲಾ
ಭಾವನೆ ಮತ್ತು ಕೋಪದ ಮೇಲೆ ನಿಯಂತ್ರಣ ಇರಲಿ. ನೀವು ವಿಶ್ವಾಸ ಇಟ್ಟವರೇ ದ್ರೋಹ ಬಗೆಯಬಹುದು. ಆರೋಗ್ಯ ಸಮಸ್ಯೆ.
ವೃಶ್ಚಿಕ
ನಿಮ್ಮ ಕನಸಿಗೆ ರೆಕ್ಕೆ ಮೂಡುವ ಬೆಳವಣಿಗೆ. ಬಯಸಿದ್ದೆಲ್ಲ -ಲಪ್ರದ. ಪ್ರೀತಿ, ವೃತ್ತಿ, ಸಂಬಂಧ ಎಲ್ಲದರಲ್ಲೂ ಪೂರಕ ಬೆಳವಣಿಗೆ.
ಧನು
ಬಹುಕಾಲದಿಂದ ಬಾಕಿ ಇದ್ದ ಕಾರ್ಯ ಪೂರ್ಣ. ಸಹೋದ್ಯೋಗಿ ಸಹಕಾರ. ಆರ್ಥಿಕ ಸ್ಥಿರತೆ. ದೈಹಿಕ ಕ್ಷಮತೆ ಕಾಯಲು ಆದ್ಯತೆ ಕೊಡಿ.
ಮಕರ
ಆರ್ಥಿಕ ಯೋಜನೆ -ಲ ನೀಡಲಿದೆ. ಶುಭ ಸುದ್ದಿ ಕೇಳುವಿರಿ. ನಿಮ್ಮ ಅಽಕಾರಕ್ಕೆ ಕುತ್ತು ತರಲು ಕೆಲವರ ಯತ್ನ. ಎಚ್ಚರದಿಂದಿರಿ.
ಕುಂಭ
ನಿಮ್ಮ ವಿರುದ್ಧ ಕೆಲವರ ಮಸಲತ್ತು. ಎಚ್ಚರವಾಗಿರಿ. ಮಾನಸಿಕ ನೆಮ್ಮದಿ ಕಲಕುವ ಪ್ರಸಂಗ ಉಂಟಾದೀತು. ಆಹಾರ ದಲ್ಲಿ ಹಿತಮಿತವಿರಲಿ.
ಮೀನ
ವ್ಯರ್ಥ ಕಾರ್ಯ ಎಂದು ನೀವು ಭಾವಿಸಿದ್ದ ವಿಷಯವು ಉತ್ತಮ ಲ ನೀಡಲಿದೆ. ಒಳ್ಳೆಯ ಸುದ್ದಿ ಕೇಳಲು ತಯಾರಾಗಿರಿ. ಆಪ್ತರ ಭೇಟಿ.
ದಿನಭವಿಷ್ಯ: ಇಂದು ಈ ರಾಶಿಯವರ ಅದೃಷ್ಟ ಬದಲಾಗುವುದು, ತಾಳ್ಮೆ ಇರಲಿ
