ಹೊಸದಿಗಂತ ಭಟ್ಕಳ :
ತಾಲೂಕಿನ ಹೆಬಳೆ ಗ್ರಾಮದ ಶ್ರೀ ಅರಿಕಲ್ ಜಟಗಾ ಮಹಾಸತಿ ದೇವಸ್ಥಾದಲ್ಲಿ ಸೋಮವಾರ ನಡೆದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೋಲಿಸರು ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಾಲಿ ನಿವಾಸಿ ಅಮಿರ್ ಹಸನ್ ಬ್ಯಾರಿ, ಭಟ್ಕಳ ನಿವಾಸಿ ಮಹಮ್ಮದ್ ಇಮ್ರಾನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಬೈಕ್, 2 ಲಕ್ಷ 21 ಸಾವಿರದ 295 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.