October 3, 2026
Saturday, October 3, 2026
spot_img

ಬಾಲಿಯಲ್ಲಿ ನಟಿ ನುಸ್ರತ್‌ ಭರೂಚಾ ಕಾರು ಅಪಘಾತ: ಏರ್‌ ಆಂಬುಲೆನ್ಸ್‌ ಮೂಲಕ ಮುಂಬೈಗೆ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿ ಪ್ರವಾಸದಲ್ಲಿದ್ದ ಬಾಲಿವುಡ್‌ ನಟಿ ನುಸ್ರತ್‌ ಭರೂಚಾ ಅವರ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಇದರಿಂದಾಗಿ ನುಸ್ರತ್‌ ಅವರ ಬೆನ್ನುಮೂಳೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಸದ್ಯ ನಟಿಯನ್ನು ಬಾಲಿಯಿಂದ ಏರ್‌ ಆಂಬುಲೆನ್ಸ್‌ ಮೂಲಕ ಮುಂಬೈಗೆ ಕರೆತರಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನುಸ್ರತ್‌ ಅವರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಕೆಲಸ ಮತ್ತು ಪ್ರವಾಸದ ಹಿನ್ನೆಲೆಯಲ್ಲಿ ನುಸ್ರತ್ ಭರೂಚಾ ಇಂಡೋನೇಷ್ಯಾದ ಬಾಲಿಗೆ ತೆರಳಿದ್ದರು. ಅಲ್ಲಿ ನಡೆದ ಅನಿರೀಕ್ಷಿತ ಅಪಘಾತದಲ್ಲಿ ಅವರ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಕರೆತರಲು ನಿರ್ಧರಿಸಲಾಯಿತು. ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿಯನ್ನು ಸ್ಟ್ರೆಚರ್ ಮೇಲೆ ಕರೆತಂದ ದೃಶ್ಯಗಳು ವೈರಲ್ ಆಗಿವೆ.

ಬೆನ್ನುಮೂಳೆಯಲ್ಲಿ ಫ್ರಾಕ್ಚರ್‌ ಆಗಿದೆ. ಶಸ್ತ್ರಚಿಕಿತ್ಸೆ ನಂತರ ಅವರಿಗೆ ಕೆಲವು ವಾರಗಳ ರೆಸ್ಟ್‌ ಬೇಕು. ತದನಂತರ ಅವರು ಮಾಮೂಲಾಗಿ ಓಡಾಡಬಹುದು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಸದ್ಯ ಅವರ ಸಿನಿಮಾ ಶೂಟ್‌ಗಳನ್ನು ಮುಂದೂಡಲಾಗಿದೆ.

Must Read