October 3, 2026
Saturday, October 3, 2026
spot_img

ಸ್ನೇಹಿತರ ಜೊತೆ ಹಂಪಿ ಟ್ರಿಪ್‌ ಪ್ಲಾನ್‌ ಮಾಡ್ತಾ ಇದ್ದೀರಾ? ಮೂರು ದಿನದ ಐಟೆನರಿ ಇಲ್ಲಿದೆ

ಆರು ತಿಂಗಳಿಗೊಮ್ಮೆಯಾದರೂ ಸ್ನೇಹಿತರ ಜೊತೆ ಟ್ರಿಪ್‌ ಹೋಗೋದು ತುಂಬಾನೇ ಮುಖ್ಯ. ಜೀವನ, ಮನೆ, ಕೆಲಸ, ಫ್ಯಾಮಿಲಿ ಎಂದು ಸಮಯಕಳೆಯುವಾಗ ಜವಾಬ್ದಾರಿಯಿಂದ ವರ್ತಿಸುತ್ತೀವಿ. ಆದರೆ ಸ್ನೇಹಿತರ ಜೊತೆ ಒಮ್ಮೆ ಸೇರಿಬಿಟ್ರೆ ಎಲ್ಲವನ್ನೂ ಮರೆತು ಮತ್ತೆ ಸ್ಟೂಡೆಂಟ್ಸ್‌ ಆಗಿಬಿಡುತ್ತೀವಿ. ನಿಮ್ಮ ಸ್ನೇಹಿತರ ಜೊತೆ ಹಂಪಿ ಟ್ರಿಪ್‌ ಪ್ಲಾನ್‌ ಮಾಡಿದ್ದೀರಿ ಎಂದಾದರೆ ಇದು ಬೆಸ್ಟ್‌ ಸಮಯ. ಅಕ್ಟೋಬರ್‌ನಿಂದ ಫೆಬ್ರವರಿವರೆಗೂ ಹಂಪಿಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಅತಿಯಾದ ಬಿಸಿಲಿರುವ ಸಮಯವನ್ನು ಅವಾಯ್ಡ್‌ ಮಾಡಿ ಬೆಳಗ್ಗೆ ಹಾಗೂ ಸಂಜೆ ನೀವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದೆ. ಮೂರು ದಿನದ ಹಂಪಿ ಟ್ರಿಪ್‌ ಹೇಗೆ ಮಾಡುವುದು? ಇಲ್ಲಿದೆ ನೋಡಿ ಲಿಸ್ಟ್‌..

ಹಿಂದಿನ ದಿನ ರಾತ್ರಿ, ಹಂಪಿ ಹತ್ತಿರವಿದ್ದರೆ ಬೆಳಗಿನ ಜಾವ ಹೊರಡಿ. ಬೆಂಗಳೂರಿನಿಂದ ಹೊರಡುವುದಾದರೆ ಬಸ್‌, ರೈಲು ಫೆಸಿಟಿಲಿ ಇದೆ. ಇದನ್ನು ಬಳಸಿಕೊಂಡು ಹೊರಡಬಹುದು. ಹೊರಡುವ ಮುನ್ನವೇ ನಿಮ್ಮ ಸ್ಟೇ ಹಾಗೂ ವಾಹನವನ್ನು ಬುಕ್‌ ಮಾಡಿಕೊಳ್ಳುವುದು ಉತ್ತಮವಾಗಿದೆ.

ದಿನ ಒಂದು

ಸ್ಟೇನಲ್ಲಿ ಫ್ರೆಶ್‌ಅಪ್‌ ಆಗಿ ಮೊದಲು ವಿರೂಪಾಕ್ಷ ದೇವಸ್ಥಾನ ನೋಡಲು ಹೊರಟುಬಿಡಿ. ನಂತರ ಹಂಪಿ ಬಜಾರ್‌, ಆನಂತರ ಹೇಮಕೂಟ ಬೆಟ್ಟ ನೋಡಿ ಇಷ್ಟರಲ್ಲಿ ದಣಿವಾಗಿ ಮಧ್ಯಾಹ್ನವೂ ಆಗಿರುತ್ತದೆ. ಆನಂತರ ಊಟ ಮಾಡಿ ಸ್ಟೇನಲ್ಲಿ ರೆಸ್ಟ್‌ ಮಾಡಿ. ರೆಸ್ಟ್‌ ಮಾಡಲು ಇಷ್ಟವಿಲ್ಲ ಎಂದಾದರೆ ಹೇಮಕೂಟ ಸುತ್ತಮುತ್ತಲಿನ ಸ್ಮಾರಕಗಳನ್ನು ನೋಡಬಹುದು. ಇನ್ನು ಸಂಜೆ ಸೂರ್ಯಾಸ್ತಕ್ಕಾಗಿ ಮಾತಂಗ ಬೆಟ್ಟಕ್ಕೆ ಹೋಗಿ. ಇಲ್ಲಿಂದ ವಾಪಾಸ್‌ ಬರುವಲ್ಲಿ ಕತ್ತಲಾಗಿರುತ್ತದೆ. ಚಂದದ ಕೆಫೆ ಅಥವಾ ಹೊಟೇಲ್‌ನಲ್ಲಿ ಟೈಮ್‌ ಪಾಸ್‌ ಮಾಡಿ.

ದಿನ ಎರಡು

ಈ ದಿನ ನೀವು ಸಾಧ್ಯವಾದಷ್ಟು ಜಾಗಗಳನ್ನು ನೋಡಿಬಿಡಿ. ಬೆಳಗ್ಗೆ ಬೇಗನೇ ಎದ್ದು ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನ ರಥ, ಸಂಗೀತ ಕಂಬಗಳನ್ನು ನೋಡಿ. ಕೆರೆಯಲ್ಲಿ ದೋಣಿಯಲ್ಲಿ ಹೋಗುವುದು, ನೀರಿನಲ್ಲಿ ಜಂಪಿಂಗ್‌ ಇಷ್ಟವಿದ್ದರೆ ಮಾಡಬಹುದು. ನಂತರ ಊಟ ಹಾಗೂ ವಿಶ್ರಾಂತಿಗೆ ಸಮಯ ನೀಡಿ. ಸಂಜೆ ಮೂರು ಗಂಟೆಗೆಲ್ಲಾ ಲೋಟಸ್‌ ಮಹಲ್‌, ಆನೆ ಸ್ಟೇಬಲ್ಸ್‌, ರಾಣಿಕೊಳ, ಮಹಾನವಮಿ ದಿಬ್ಬಕ್ಕೆ ಭೇಟಿ ನೀಡಿ. ಆನಂತರ ಹಂಪಿ ಬಜಾರ್‌ನಲ್ಲಿ ಶಾಪಿಂಗ್‌ ಮಾಡಿ. ಕಾಫಿ ಕುಡಿಯಿರಿ. ಇಷ್ಟನ್ನು ಮಾಡಿ ದಿನವನ್ನು ಮುಕ್ತಾಯಗೊಳಿಸಿ.

ದಿನ ಮೂರು

ಈ ದಿನವೂ ಬೇಗ ಎದ್ದು ಅಚ್ಯುತಾಯ ದೇವಸ್ಥಾನ, ಸುಗ್ರೀವ ಗುಹೆ, ತುಂಗಭದ್ರಾ ನದಿಯನ್ನು ನೋಡಿ ಆನಂತರ ಊಟ ಮುಗಿಸಿ ಸಮಯವಿದ್ದರೆ ಸನಾಪುರ ಲೇಕ್‌ ನೋಡಬಹುದು. ಇನ್ನೂ ಹೆಚ್ಚಿನ ಸಮಯವಿದ್ದರೆ ನೀವು ಹಂಪಿಯಿಂದ ತುಸು ದೂರ ಇರುವ ಬಾದಾಮಿಗೆ ಹೋಗಬಹುದು. ಬಾದಾಮಿಯಲ್ಲಿಯೇ ಒಂದು ದಿನ ಉಳಿಯುವಂತೆಯೂ ಪ್ಲಾನ್‌ ಮಾಡಬಹುದು.

Must Read