October 8, 2026
Thursday, October 8, 2026

ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ಸಿಂಪಲ್ ಟಿಪ್ಸ್

ಡಯಾಬಿಟಿಸ್ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಬೆಳಗಿನ ಸಮಯ ಬಹಳ ಮುಖ್ಯವಾದದ್ದು. ಬೆಳಿಗ್ಗೆ ಸೇವಿಸುವ ಉಪಹಾರವು ದಿನವಿಡೀ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ಧರಿಸುತ್ತದೆ. ಆದರೆ ಅನೇಕರು ಬೆಳಿಗ್ಗೆ ತಿಳಿಯದೇ ಮಾಡುವ ಕೆಲ ಆಹಾರ ಪದ್ಧತಿಯ ತಪ್ಪುಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುತ್ತದೆ. ಇದನ್ನು ತಡೆಯಲು ಬೆಳಗಿನ ತಿಂಡಿಯ ವಿಚಾರದಲ್ಲಿ ಸರಿಯಾದ ಕಾಳಜಿ ವಹಿಸುವುದು ಅತ್ಯಗತ್ಯ.

ಇವುಗಳನ್ನು ಬೆಳಗಿನ ಉಪಹಾರದಲ್ಲಿ ಸೇವಿಸಿ

ರಾಗಿ ದೋಸೆ, ರಾಗಿ ರೊಟ್ಟಿ, ಒಟ್ಸ್ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಉಪಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಸಕ್ಕರೆ ಪ್ರಮಾಣ ತಕ್ಷಣವೇ ಹೆಚ್ಚಾಗದಂತೆ ತಡೆಯುತ್ತವೆ.

ಮೊಳಕೆ ಬರಿಸಿದ ಹೆಸರುಕಾಳು, ಕಡಲೆಕಾಳು, ಬೇಯಿಸಿದ ಮೊಟ್ಟೆ ಅಥವಾ ಪನೀರ್‌ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರೋಟೀನ್ ಸಿಗುವುದಲ್ಲದೆ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆ.

ಮೆಂತೆ ಸೊಪ್ಪಿನ ರೊಟ್ಟಿ ಅಥವಾ ಉಪ್ಪಿಟ್ಟಿಗೆ ಹೆಚ್ಚು ತರಕಾರಿಗಳನ್ನು ಸೇರಿಸಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೆನೆಸಿದ ಬಾದಾಮಿ, ವಾಲ್ನಟ್ಸ್ ಮತ್ತು ನಟ್ಸ್ ಸೇವನೆ ಬೆಳಗಿನ ಶುಗರ್ ಹೆಚ್ಚಾಗದಂತೆ ತಡೆಯಲು ಸಹಾಯ ಮಾಡುತ್ತದೆ.

ಈ ಆಹಾರಗಳಿಂದ ದೂರವಿರಿ

ಮೈದಾದಿಂದ ಮಾಡಿದ ಪೂರಿ, ಬ್ರೆಡ್ ಹಾಗೂ ಬಿಸ್ಕೆಟ್ ಗಳು ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ತಕ್ಷಣವೇ ಹೆಚ್ಚಿಸುತ್ತವೆ.

ಬೆಳಿಗ್ಗೆ ಕುಡಿಯುವ ಸಕ್ಕರೆ ಚಹಾ, ಕಾಫಿ ಅಥವಾ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್‌ಗಳು ದೇಹಕ್ಕೆ ನೇರವಾಗಿ ಸಕ್ಕರೆಯನ್ನು ರವಾನಿಸುತ್ತವೆ.

ಜಾಮ್, ಪೇಸ್ಟ್ರಿ, ಕೇಕ್ ಮತ್ತು ಜಿಡ್ಡಿನ ಬೋಂಡಾ-ಬಜ್ಜಿಯಂತಹ ತಿಂಡಿಗಳನ್ನು ಬ್ರೇಕ್‌ಫಾಸ್ಟ್‌ನಲ್ಲಿ ಸಂಪೂರ್ಣವಾಗಿ ತ್ಯಜಿಸಬೇಕು.

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸಿಹಿ ಅಥವಾ ಮೈದಾ ಪದಾರ್ಥಗಳನ್ನು ತಿನ್ನುವುದು ಅಪಾಯಕಾರಿ. ಪ್ರೋಟೀನ್, ಉತ್ತಮ ಕೊಬ್ಬು ಹಾಗೂ ನಾರಿನಂಶ ಸಮತೋಲನದಲ್ಲಿರುವ ಸರಳ ಹಾಗೂ ಪೌಷ್ಟಿಕ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಧುಮೇಹವನ್ನು ಸುಲಭವಾಗಿ ನಿಯಂತ್ರಣದಲ್ಲಿಡಬಹುದು.

Must Read