January17, 2026
Saturday, January 17, 2026
spot_img

ದುಡ್ಡಿನ ಸಮಸ್ಯೆ ಕಾಡ್ತಾ ಇದ್ಯಾ? ಪರ್ಸ್‌ನಲ್ಲಿ ಈ ವಸ್ತು ಇಡಬೇಡಿ

ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲ ಅನ್ನೋದು ಸಾಮಾನ್ಯವಾದ ಮಾತು.ಆದರೆ ನಮ್ಮ ಪರ್ಸ್‌ನಲ್ಲಿ ನಾವು ಇಡುವ ಕೆಲವೊಂದು ವಸ್ತುಗಳು ಬ್ಯಾಡ್‌ಲಕ್‌ ಎನ್ನಲಾಗುತ್ತದೆ. ಪರ್ಸ್‌ನಲ್ಲಿ ಏನನ್ನು ಇಡಬಾರದು?

ಸಾಕಷ್ಟು ಜನರಿಗೆ ಪರ್ಸ್​ನಲ್ಲಿ ಹಿರಿಯರ ಫೋಟೋ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಸ್ತು ಪ್ರಕಾರ ಯಾವುದೇ ಫೋಟೋ ಇಡುವುದು ಶುಭವಲ್ಲ. ಕೆಲವರು ತಮ್ಮ ಪರ್ಸ್‌ಗಳಲ್ಲಿ ದೇವರ ಫೋಟೋ ಇಟ್ಟುಕೊಳ್ಳುತ್ತಾರೆ. ಹಾಗೆ ಮಾಡುವುದು ತಪ್ಪು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಪರ್ಸ್ ಬದಲು ಮನೆಯಲ್ಲಿ ದೇವರನ್ನು ಪೂಜಿಸಿ.

ನಿಮ್ಮ ಪರ್ಸ್​ನಲ್ಲಿ ಎಂದಿಗೂ ಹರಿದ ಹಣವನ್ನು ಇಟ್ಟುಕೊಳ್ಳಬೇಡಿ. ಇದರೊಂದಿಗೆ ಮುರಿದ ವಸ್ತುಗಳನ್ನು ಎಂದಿಗೂ ಪರ್ಸ್‌ ನಲ್ಲಿ ಇಡಬೇಡಿ ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಈಗಾಗಲೇ ಹರಿದ ನೋಟು ಇದ್ದರೆ, ತಕ್ಷಣ ಅದನ್ನು ತೆಗೆದುಬಿಡಿ. ಹರಿದ ಪರ್ಸ್​​ ಸಹ ಬಳಸಬಾರದು. ಇದಲ್ಲದೇ ಹಣವನ್ನು ಎಂದಿಗೂ ಪರ್ಸ್‌ನಲ್ಲಿ ಸಡಿಲವಾಗಿ ಇಡಬಾರದು. ವಾಲೆಟ್‌ನಲ್ಲಿ ಹಣವನ್ನು ಸರಿಯಾಗಿ ಅಂದರೆ ನೋಟುಗಳು ಮತ್ತು ನಾಣ್ಯಗಳನ್ನು ಪ್ರತ್ಯೇಕವಾಗಿ ಇಡುವುದು ಯಾವಾಗಲೂ ಉತ್ತಮ.

ವಾಸ್ತು ಶಾಸ್ತ್ರದ ಪ್ರಕಾರ, ನೀವು ನಿಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್ ಗಳನ್ನು ಇಡಬಾರದು. ಇವು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅನವಶ್ಯಕ ವಸ್ತುಗಳನ್ನು ಹಣ ಶೇಖರಿಸುವ ಸ್ಥಳದಲ್ಲಿ ಅಥವಾ ಪರ್ಸ್ ನಲ್ಲಿ ಇಡುವುದು ಶುಭವಲ್ಲ. ಇದಲ್ಲದೇ ಇಎಂಐ ಪೇಪರ್ಬಿಲ್ ಅಥವಾ ಇಎಂಐ ಪೇಪರ್‌ನಂತಹ ವಸ್ತುಗಳನ್ನು ವ್ಯಾಲೆಟ್‌ನಲ್ಲಿ ಇಡಬಾರದು.

Must Read

error: Content is protected !!