October 11, 2026
Sunday, October 11, 2026
spot_img

ದಿನಭವಿಷ್ಯ | ಕುಟುಂಬದಲ್ಲಿ ಸಂಭ್ರಮದ ವಾತಾವರಣ, ಆರೋಗ್ಯದ ಮೇಲೆ ನಿಗಾ ಇರಲಿ

ಮೇಷ
ಬದಲಾವಣೆ ವಿರೋಧಿಸಬೇಡಿ.ಅದಕ್ಕೆ  ಹೊಂದಿಕೊಳ್ಳುವುದು ಒಳ್ಳೆಯದು. ಸೋಂಕಿನ ಸಮಸ್ಯೆ ಕಾಡಬಹುದು. ಕೌಟುಂಬಿಕ ಸಮ್ಮಿಲನ.
ವೃಷಭ
ಸವಾಲು ಹೆಚ್ಚು. ಎದುರಿಸುವುದು ಕಷ್ಟ ಎಂಬಂತೆ ಭಾಸವಾದೀತು. ಧೃತಿಗೆಡಬೇಡಿ. ಸೂಕ್ತ ನೆರವು, ದೈವಕೃಪೆ ಒದಗುವುದು.
ಮಿಥುನ
ನಿಮ್ಮ ಭಾವನಾತ್ಮಕ ಆರೋಗ್ಯ ಕಾಪಾಡಿ. ಭಾವುಕರಾಗಿ ಕೆರಿಯರ್ ಹಾಳು ಮಾಡಿಕೊಳ್ಳದಿರಿ. ಉದ್ಯೋಗಾಕಾಂಕ್ಷಿಗಳಿಗೆ ಗ್ರಹಗತಿ ಪೂರಕವಾಗಿದೆ.
ಕಟಕ
ಸಂಕಷ್ಟ ಒದಗಲಿದೆ. ಆದರೆ ಅದು ನಿಮ್ಮ ಸ್ಥೈರ್ಯ ಗಟ್ಟಿಗೊಳಿಸಲೂ ನೆರವಾಗಲಿದೆ. ಕೆಲಸದ ಒತ್ತಡ ಕಡಿಮೆಗೊಳಿಸಿ. ವಿತ್ತ ಸ್ಥಿತಿ ಸಮಾಧಾನಕರ.
ಸಿಂಹ
ಕೌಟುಂಬಿಕ ಸಂಬಂಧದಲ್ಲಿ ಉಂಟಾಗಿದ್ದ ಮುನಿಸು ನಿವಾರಣೆ. ಉದ್ಯಮಿಗಳಿಗೆ ಆರಂಭಿಕ ಹಿನ್ನಡೆ ಒದಗಿದರೂ ಬಳಿಕ ನಿರಾಳತೆ.
ಕನ್ಯಾ
ನಿಮ್ಮ ಸಮಸ್ಯೆಗೆ ಇತರರನ್ನು ದೂರಬೇಡಿ. ನಿಮ್ಮಲ್ಲೇ ಸಮಸ್ಯೆಯ ಮೂಲವಿದೆ. ಅದು ಸರಿ ಮಾಡಿಕೊಳ್ಳಿ. ಬಂಧು ಜತೆ ವಿರಸವಾದೀತು.
ತುಲಾ
ಅಶಾಂತ ಮನಸ್ಸು. ಕೆಲ ವಿಷಯ ಅಸಹನೆ ಮೂಡಿಸಲಿದೆ. ಅದನ್ನು ಬದಿಗಿಟ್ಟು ನಿಮ್ಮ ಗುರಿ ಸಾಧಿಸಲು ಗಮನ ಕೊಡಿ. ಆಪ್ತ ಬಂಧು ಭೇಟಿ.
ವೃಶ್ಚಿಕ
ಪ್ರೀತಿಪಾತ್ರರನ್ನು ಗೌರವದಿಂದ ಕಾಣಿರಿ. ಬಾಂಧವ್ಯ ಉಳಿಯಲು ಸಮಾನಗೌರವ ಅಗತ್ಯ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು.
ಧನು
ಹಣಕಾಸು ಸ್ಥಿತಿ ಉತ್ತಮ. ವ್ಯವಹಾರ ಉಜ್ವಲ. ಕಾಡುತ್ತಿದ್ದ ದೈಹಿಕ ನೋವು ಶಮನ. ಕೌಟುಂಬಿಕ ನೆಮ್ಮದಿ. ಹಳೆ ಸ್ನೇಹಿತರ ಭೇಟಿ ಸಾಧ್ಯತೆ.
ಮಕರ
ಕೆಲವರ ಕಿರಿಕಿರಿ ಬಾಽಸಲಿದೆ. ನಿಮ್ಮ ಅಸಹನೆ ಎಲ್ಲರ ಮೇಲೆ ಕಾರಬೇಡಿ.  ಕೆಲಸ ಮತ್ತು ಕುಟಂಬದ ಮಧ್ಯೆ ಸಮತೋಲನವಿರಲಿ.
ಕುಂಭ
ಗ್ರಹಗತಿ ಪೂರಕ. ಸಂಬಂಧದಲ್ಲಿ ಒಳಿತನ್ನು ತರಲಿದೆ.ಮನಸ್ತಾಪ ಅಂತ್ಯ. ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ. ಉದ್ಯೋಗ ಪ್ರಾಪ್ತಿ.
 ಮೀನ
ಬದಲಾವಣೆಗೆ ವಿರೋಧ ಬೇಡ. ಅದನ್ನು ಸ್ವಾಗತಿಸಿ. ಸಣ್ಣ ಜಗಳದಿಂದ ದೂರವಿರಿ. ಮಾನಸಿಕ ಒತ್ತಡ ತರುವ ಕೆಲಸಗಳನ್ನು ತಪ್ಪಿಸಿಕೊಳ್ಳಿ.

Must Read