ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿಯ ವೇಳೆ ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದ ಚಂಡೀಗಢ ಮೂಲದ ಫಾರ್ಮಾ ಕಂಪನಿಯ ಉದ್ಯಮಿಯೊಬ್ಬರು, ಇದೀಗ, ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೂ ಮೊದಲು ತಮ್ಮ ತಂಡಕ್ಕೆ ಮತ್ತೆ ಆರು ಹೆಚ್ಚುವರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ‘ಡಬಲ್ ಗಿಫ್ಟ್’ ಕೊಟ್ಟಿದ್ದಾರೆ.
ಉದ್ಯಮಿಯ ಹೆಸರು ಎಂ.ಕೆ. ಭಾಟಿಯಾ. ಇವರು ಚಂಡೀಗಢದಲ್ಲಿ ಫಾರ್ಮಾ ಕಂಪನಿ ನಡೆಸುತ್ತಿದ್ದಾರೆ. ಕೆಲವೇ ತಿಂಗಳುಗಳ ಅಂತರದಲ್ಲಿ ತಮ್ಮ ಸಿಬ್ಬಂದಿಗೆ ಡಬಲ್ ಉಡುಗೊರೆ ನೀಡಿದ ಮಾಲೀಕನಿಗಿರುವ ಉದ್ಯೋಗಿಗಳ ಮೇಲಿನ ಪ್ರೀತಿ ಮತ್ತು ಹೃದಯಸ್ಪರ್ಶಿ ಕ್ರಮ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ನೀವು ಕೆಲಸ ಮಾಡಿದ್ದಕ್ಕೆ ತಕ್ಕಂತಹ ಉಡುಗೊರೆ ನೀಡಿದ್ದೇವೆ. ಇನ್ನೂ ಶ್ರದ್ಧೆಯಿಂದ ಕೆಲಸ ಮಾಡಿ. ನಿಮ್ಮ ನಿಮ್ಮ ಕೆಲಸದಲ್ಲಿ ನೀವು ಎಕ್ಸ್‌ಪರ್ಟ್ ಆಗಿ ಎಂದು ಸಲಹೆ ನೀಡಿದ್ದಾರೆ.

