January21, 2026
Wednesday, January 21, 2026
spot_img

ಬಾರ್‌ನಲ್ಲಿ ಸಣ್ಣ ವಿಷಯಕ್ಕೆ ನಡೆದ ಕಿರಿಕ್‌ ಕೊ*ಲೆಯಲ್ಲಿ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರು ನಗರದ ಬಾರ್‌ ಒಂದರಲ್ಲಿ ಬಿಹಾರಿ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತೇಜು (40) ಬಿಹಾರಿ ಕಾರ್ಮಿಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಳೆದ ರಾತ್ರಿ (ಜ.20) ತೇಜು ಮೇಲೆ ಹಲ್ಲೆ ಮಾಡಿ, ಅಸ್ವಸ್ಥಗೊಂಡ ಬಳಿಕ ಒಂದು ಕಿಮೀ ದೂರದ ಪಟಾಕಿ ಮೈದಾನಕ್ಕೆ ತಂದು ಎಸೆದಿದ್ದರು ಎಂದು ಆರೋಪಿಸಲಾಗಿದೆ. ಇಂದು (ಜ.21) ಬೆಳಗ್ಗೆ ಆಟೋ ಚಾಲಕರೊಬ್ಬರು ತೇಜುವನ್ನು ನೋಡಿ, ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದರು.

ತೀವ್ರ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

Must Read