ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಒಡೆದ ಮಡಿಕೆ ಆಕೃತಿಯ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ.
ಸಿಕ್ಕ ಒಡೆದ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದೆ. ಈ ಪ್ರಾಚ್ಯಾವಶೇಷವನ್ನು ತುಂಬಾ ನಾಜೂಕಿನಿಂದ ಸ್ವಚ್ಛಗೊಳಿಸಿ, ಅದನ್ನು ಹೊರ ತೆಗೆಯುವ ಕೆಲಸ ಸಿಬ್ಬಂದಿಗಳು ಮಾಡಿದರು. ಈ ಮಡಿಕೆ ಅವಶೇಷ ಯಾವ ಕಾಲದ್ದು, ಇದು ದವಸ ಧಾನ್ಯಗಳನ್ನು ಸಂಗ್ರಹಿಸುವ ಮಡಿಕೆನಾ? ಚಿನ್ನ, ಆಭರಣಗಳನ್ನು ಇರಿಸಿದ್ದ ಮಡಿಕೆಯಾ ಎಂಬ ಬಗ್ಗೆ ಕುತೂಕಲ ಮೂಡಿಸಿದೆ. ಈ ಮಡಿಕೆ ಒಳ ಭಾಗದ ಮಣ್ಣನ್ನು ಸಹ ಕಾರ್ಮಿಕರು ಪರಿಶೀಲನೆ ಮಾಡ್ತಿದ್ದಾರೆ.
ಇನ್ನು ಲಕ್ಕುಂಡಿಯಲ್ಲಿ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನ ಚಾಲುಕ್ಯರ ಕಾಲದ ಪುರಾತನ ಕಾಲದ್ದು ಎನ್ನಲಾಗುತ್ತಿದೆ. ಇದು ಹೊರಗೆ ನೋಡಿದ್ರೆ ಮನೆ ಆಕಾರದಲ್ಲಿದೆ. ಒಳಗೆ ಹೋದರೆ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಚೌಕಿಮಠ ಎಂಬ ಐದು ಕುಟುಂಬಗಳು ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿದ್ದಾರೆ.
ಈ ದೇವಸ್ಥಾನವೇ ಈ ಕುಟುಂಬಸ್ಥರಿಗೆ ಸೂರಾಗಿದೆ. ಈ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನವಿದೆ. ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ.
ಈ ದೇವಸ್ಥಾನ ಆವರಣದಲ್ಲಿ ಶರಣಯ್ಯ, ಶೇಖರಯ್ಯ, ಬಸಮ್ಮ, ಈರಯ್ಯ, ಕೊಟ್ರಯ್ಯ ಹಾಗೂ ಈರಮ್ಮ ಚೌಕಿಮಠ ಎಂಬ ಐದು ಕುಟುಂಬ ವಾಸ ಮಾಡುತ್ತಿವೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದ್ರೆ ಬಿಟ್ಟುಕೊಡ್ತೀವಿ ಎಂದು ಚೌಕಿಮಠ ಕುಟುಂಬಸ್ಥರು ಹೇಳುತ್ತಿದ್ದಾರೆ. ದೇವಸ್ಥಾನವನ್ನು ಮನೆ ಮಾಡಿಕೊಂಡ ಕುಟುಂಬಸ್ಥರು ಈಗ ಆತಂಕಕ್ಕೆ ಒಳಗಾಗಿದ್ದಾರೆ.


