Monday, January 12, 2026

ಕಣ್ಣೆದುರೇ ಮಗುವಿನ ದುರ್ಮರಣ: ರಕ್ಷಣೆಗಾಗಿ ಬಾವಿಗಿಳಿದರೂ ಉಳಿಯಲಿಲ್ಲ ಕಂದಮ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ನಗರದ ಕಿನ್ನಿಮೂಲ್ಕಿ ಬಳಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.

ಕೀರ್ತನ ಮೃತ ಮಗು ಎಂದು ಗುರುತಿಸಲಾಗಿದೆ. ತಾಯಿ ನಯನ ಅವರು ಬಾವಿಯಿಂದ ನೀರು ಸೇದುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಮಗು ಅವರ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿದೆ.

ಘಟನೆ ನಡೆದ ತಕ್ಷಣವೇ ತಾಯಿ ನಯನ ಅವರು ಹಗ್ಗದ ಸಹಾಯದಿಂದ ಮಗುವಿನ ರಕ್ಷಣೆಗಾಗಿ ಬಾವಿಗಿಳಿದಿದ್ದಾರೆ. ಆದರೆ, ಅಷ್ಟರಾಗಲೇ ಮಗು ಕೊನೆಯುಸಿರೆಳೆದಿತ್ತು. ಈ ಘಟನೆಯಿಂದ ತಾಯಿ ಮತ್ತು ಕುಟುಂಬದವರು ತೀವ್ರ ದುಃಖತಪ್ತರಾಗಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!