February 21, 2026
Saturday, February 21, 2026
spot_img

ಕಳಪೆ ಪ್ರದರ್ಶನಕ್ಕೆ ತಿರುಗೇಟು: ರಾಂಚಿಯ ಪಿಚ್‌ನಲ್ಲಿ ಭಾರತ vs ಸೌತ್ ಆಫ್ರಿಕಾ ODI ಕದನ!

ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಅನುಭವಿಸಿದ ಹೀನಾಯ ಸೋಲಿನ ಕಹಿಯನ್ನು ಮರೆತು, ಭಾರತ ತಂಡವು ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಇಂದಿನಿಂದ (ನವೆಂಬರ್ 30) ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯವು ರಾಂಚಿಯ ಜೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಪಾಲಿಗೆ ಇದು ಸೇಡು ತೀರಿಸಿಕೊಳ್ಳುವ ಮಹತ್ವದ ಸರಣಿಯಾಗಿದೆ.

ಪಂದ್ಯದ ಮಾಹಿತಿ ಮತ್ತು ಪ್ರಸಾರ

ಪಂದ್ಯ ಆರಂಭ: ಮಧ್ಯಾಹ್ನ 2:00 PM
ಟಾಸ್ ಸಮಯ: ಮಧ್ಯಾಹ್ನ 1:30 PM

ನೇರ ಪ್ರಸಾರ (ಟಿವಿ): ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಲೈವ್ ಸ್ಟ್ರೀಮಿಂಗ್: ಜಿಯೋ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್

ಸರಣಿಯ ಸಂಪೂರ್ಣ ವೇಳಾಪಟ್ಟಿ

ಪಂದ್ಯದಿನಾಂಕಸ್ಥಳಸಮಯ
ಮೊದಲ ಏಕದಿನ ಪಂದ್ಯನವೆಂಬರ್ 30ರಾಂಚಿಮಧ್ಯಾಹ್ನ 2:00 PM
ಎರಡನೇ ಏಕದಿನ ಪಂದ್ಯಡಿಸೆಂಬರ್ 03ರಾಯ್‌ಪುರಮಧ್ಯಾಹ್ನ 2:00 PM
3ನೇ ಏಕದಿನ ಪಂದ್ಯಡಿಸೆಂಬರ್ 06ವಿಶಾಖಪಟ್ಟಣಂಮಧ್ಯಾಹ್ನ 2:00 PM

ಈ ಸರಣಿಗಾಗಿ ಕೆಎಲ್ ರಾಹುಲ್ ಮತ್ತು ಟೆಂಬಾ ಬವುಮಾ ನೇತೃತ್ವದಲ್ಲಿ ಬಲಿಷ್ಠ ತಂಡಗಳನ್ನು ಪ್ರಕಟಿಸಲಾಗಿದೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಒಟ್ನೀಲ್ ಬಾರ್ಟ್‌ಮ್ಯಾನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಝ್​​ಕೆ, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸೆನ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್​​ಗಿಡಿ, ರಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಯೆನ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !