ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ವ್ಯಕ್ತಿಯೊಬ್ಬ HR ಮ್ಯಾನೇಜರ್ ಆಗಿದ್ದ ತನ್ನ ಲವರ್ ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲವೊಂದರಲ್ಲಿ ಕಾಲುವೆಗೆ ಎಸೆದಿದ್ದಾನೆ.
ಯುವತಿಯನ್ನು ಮಿಂಕಿ ಶರ್ಮಾ (30) ಎಂದು ಗುರುತಿಸಲಾಗಿದೆ. ಆಗ್ರಾದ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಹೆಚ್ ಆರ್ ಮ್ಯಾನೇಜರ್ ಆಗಿದ್ದರು. ಅದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ತಿಳಿದುಬಂದಿದೆ ಎಂದು ಡಿಸಿಪಿ (ನಗರ) ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.
ವಿನಯ್ ಮಿಂಕಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಆಕೆ ನಿರಾಕರಿಸಿದ್ದಾರೆ. ಇದು ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ವಾಗ್ವಾದದ ನಂತರ ತೆಂಗಿನಕಾಯಿ ಕತ್ತರಿಸಲು ಬಳಸುವ ಚಾಕುವಿನಿಂದ ಪದೇ ಪದೇ ಚುಚ್ಚಿದ್ದು, ಆಕೆಯ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಪಾರ್ಸೆಲ್ ಟೇಪ್‌ನಿಂದ ಮುಚ್ಚಿದ್ದಾನೆ. ತಲೆಯನ್ನು ಪ್ರತ್ಯೇಕ ಗೋಣಿಚೀಲದಲ್ಲಿ ಇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 24 ರ ತಡರಾತ್ರಿ ಈ ಘಟನೆ ನಡೆದಿದ್ದು, ತದನಂತರ ಆರೋಪಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಯಮುನಾ ನದಿಗೆ ಎಸೆಯಲು ಹೊರಟಿದ್ದಾನೆ. ಆದರೆ ಅದನ್ನು ಸೇತುವೆಯ ಮೇಲೆ ಬಿಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತುಂಡು ತುಂಡಾಗಿದ್ದ ತಲೆಯನ್ನು ಕಪ್ಪು ಪ್ಯಾಕೆಟ್‌ನಲ್ಲಿಟ್ಟು ಕಾಲುವೆಯಲ್ಲಿ ಎಸೆದಿದ್ದು, ಅದನ್ನು ಪತ್ತೆ ಹಚ್ಚಲು ಮುಳುಗು ತಜ್ಞರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಜನವರಿ 25 ರಂದು ವಿನಯ್‌ನನ್ನು ಬಂಧಿಸಿದ್ದಾರೆ.



