ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 171 ರನ್ ಸಿಡಿಸಿತು. ಈ ಮೂಲಕ ಭಾರತ ಕಠಿಣ ಟಾರ್ಗೆಟ್ ನೀಡಿದೆ.
ಮೊದಲು ಬ್ಯಾಟಿಂಗ್ ಇಳಿದ ಪಾಕ್ ಪರ ಶಾಹೀಬ್‌ಜಾದ ಫರ್ಹಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.. ಆರಂಭದಲ್ಲೇ ಕುಸಿತ ಕಂಡಿದ್ದ ಪಾಕಿಸ್ತಾನಕ್ಕೆ ಫರ್ಹಾನ್ ಬ್ಯಾಟಿಂಗ್ ನೆರವಾಯಿತು.
ಫಕರ್ ಜಮಾನ್ 15 ರನ್ ಸಿಡಿಸಿ ಅಬ್ಬರಿಸುತ್ತಿದ್ದತೆ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಅತ್ತ ಒಂದೆಡೆ ಫರ್ಹಾನ್ ಅಬ್ಬರ ಮುಂದುವರಿದಿತ್ತು.ಇತ್ತ ಸೈಮ್ ಆಯೂಬ್ 21 ರನ್ ಸಿಡಿಸಿ ಔಟಾದರು. ಇತ್ತ ಹುಸೈನ್ ತಲಾಟ್ 10 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ಫರ್ಹಾನ್ 58 ರನ್ ಸಿಡಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.
ಅಂತಿಮ ಹಂತದಲ್ಲಿ ಮೊಹಮ್ಮದ್ ನವಾಜ್ ಹಾಗೂನಾಯಕ ಸಲ್ಮಾನ್ ಆಘಾ ಜೊತೆಯಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಮೊಹಮ್ಮದ್ ನವಾಜ್ 19 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆದರೆ ಫಹೀಮ್ ಆಸೀಮ್ ಸಿಕ್ಸರ್ ಮೂಲಕ ಖಾತೆ ಆರಂಭಿಸಿದರು. ಫಾಹೀಮ್ ಅಶ್ರಪ್ 8 ಎಸೆತದಲ್ಲಿ ಅಜೇಯ 20 ರನ್ ಸಿಡಿದರೆ ಸಲ್ಮಾನ್, ಅಜೇಯ 17 ರನ್ ಸಿಡಿಸಿದರು. ಭಾರತಕ್ಕೆ 172 ರನ್ ಟಾರ್ಗೆಟ್ ನೀಡಲಾಗಿದೆ.