Wednesday, September 17, 2025

ಶಿರಾಳಕೊಪ್ಪದಲ್ಲಿ ಹಿಂದೂ ಮಹಾಗಣಪತಿಯ ಅದ್ದೂರಿ ವಿಸರ್ಜನಾ ಮೆರವಣೆಗೆ

ಹೊಸದಿಗಂತ ವರದಿ, ಶಿವಮೊಗ್ಗ:

ಶಿರಾಳಕೊಪ್ಪ ಪಟ್ಟಣದ ಸೊರಬ ರಸ್ತೆಯ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ಗಣೇಶ ವಿಸರ್ಜನಾ ಮೆರವಣೆಗೆಯು ಬುಧವಾರ ಮಧ್ಯಾಹ್ನ ವಿಶೇಷ ಪೂಜೆ ಸಲ್ಲಿಸುವುದ ಮೂಲಕ ಅದ್ದೂರಿಯಾಗಿ ನೆರವೇರಿತು

ಸೊರಬ ರಸ್ತೆಯ ಮೂಲಕ ಹೊರಟ ಶೋಭಾ ಯಾತ್ರೆಯು ಆನವಟ್ಟಿ ರಸ್ತೆ, ಬಸ್ಟ್ಯಾಂಡ್ ವೃತ್ತ, ಶಿಕಾರಿಪುರ ರಸ್ತೆ, ಹೊಂಡದಕೇರಿ, ಹೆಚ್.ಕೆ.ರಸ್ತೆ, ಮುಖಾಂತರ ಹಾದು ಬಸ್ಟ್ಯಾಂಡ್ ವೃತ್ತದಲ್ಲಿ ಹರಾಜು ಪ್ರಕ್ರಿಯೆ ಮುಗಿಸಿ ವಡ್ಡಿನ ಕೆರೆಯಲ್ಲಿ ವಿಸರ್ಜಿಸಲಾಯಿತು, ಮರೆವಣೆಯಲ್ಲಿ ಭದ್ರಾವತಿಯ ಬಿಗ್ ಡ್ಯಾಡಿ ಖ್ಯಾತಿಯ ಡಿ.ಜೆ. ಶಬ್ದಕ್ಕೆ ಯುವಕರು ಹುಚ್ಚೆದ್ದು ಕುಣಿದರು, ಮಹಿಳೆಯರೂ ಹಾಡಿಗೆ ನೃತ್ಯ ಮಾಡಿದರು, ಮಂಗಳೂರಿನ ನಾಸಿಕ್ ಡೋಲ್, ಗೌಟೂರುನ ಗೊಂಬೆ ಕುಣಿತ, ಸ್ಥಳೀಯ ಕಲಾವಿದ ಮಲ್ಲಿಕಾರ್ಜುನ ಹುಲಿ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದರು, ರಸ್ತೆಯ ಇಕ್ಕಲಿನಲ್ಲಿ ಅಕ್ಕಪಕ್ಕದ ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ವಿಕ್ಷೀಸಿದರು, ಕನಕ ಹೋರಿ ಮಾಲೀಕ ಅಬ್ಬಾಸ್ ಮತ್ತು ಕೆಲ ಮುಸ್ಲಿಂ ಯುವಕರು ಮೆರವಣಿಗೆಲ್ಲಿ ಪಾನಕ ನೀಡಿ ಭಾವೈಕತೆ ಸಂದೇಶ ಸಾರಿದರು ಇನ್ನು ಕೆಲ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ