Tuesday, October 21, 2025

ದೀಪಾವಳಿಗೆ ಭರ್ಜರಿ ಗಿಫ್ಟ್! ಸಿಕ್ಕಿದ್ರೆ ಇಂತ ಕಂಪನಿಯಲ್ಲಿ ಕೆಲಸ ಸಿಗ್ಬೇಕು ಕಣ್ರೀ..!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಬ್ಬಗಳ ಸಮಯದಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಇದ್ದೆ ಇದೆ. ಆದರೆ ಈ ಬಾರಿ MITS ಫಾರ್ಮಾ ಕಂಪನಿಯ ಮಾಲೀಕ ಎಂ.ಕೆ.ಭಾಟಿಯಾ ಅವರ ದೀಪಾವಳಿ ಗಿಫ್ಟ್ ಎಲ್ಲರಿಗೂ ಆಶ್ಚರ್ಯ ತಂದಿದೆ. ನಿಮಗೂ ಅಚ್ಚರಿ ಆಗ್ಬಹುದು ಖಂಡಿತ. ಅವರು ತಮ್ಮ 51 ಆಯ್ದ ಉದ್ಯೋಗಿಗಳಿಗೆ 51 ಲಕ್ಷುರಿ ಎಸ್‌ಯುವಿ ಕಾರ್‌ಗಳನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದು ಕೇವಲ ಉಡುಗೊರೆ ಮಾತ್ರವಲ್ಲ, ಅವರು ಕಂಪನಿಯ ಯಶಸ್ಸಿಗೆ ಕಾರಣರಾದ ಉದ್ಯೋಗಿಗಳ ಶ್ರಮ ಮತ್ತು ಬದ್ಧತೆಯನ್ನು ಗೌರವಿಸುವುದರನ್ನೂ ತೋರಿಸುತ್ತದೆ.

ಈ ಹಿಂದೆ 2002ರಲ್ಲಿ ಆರ್ಥಿಕ ಕಷ್ಟವನ್ನು ಎದುರಿಸಿದ್ದ ಎಂ.ಕೆ.ಭಾಟಿಯಾ, ಮೆಡಿಕಲ್ ಸ್ಟೋರ್ ಆರಂಭಿಸಿ ಸೋಲು ಅನುಭವಿಸಿದ್ದರೂ, ಆದರೆ ಹಿಂದೆ ಹೆಜ್ಜೆ ಹಾಕದೇ 2015ರಲ್ಲಿ MITS ಫಾರ್ಮಾ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದೀಗ 12 ಕಂಪನಿಗಳ ಮಾಲೀಕರಾಗಿರುವ ಅವರು, ತಮ್ಮ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಮೂಲಕ ತಮ್ಮ ಯಶಸ್ಸಿನ ಕಥೆಯನ್ನು ಇನ್ನಷ್ಟು ಸ್ಫೂರ್ತಿದಾಯಕವಾಗಿಸಿದ್ದಾನೆ.

ಈ ಉದಾರತೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಹಲವರು ಮೆಚ್ಚುಗೆಯಲ್ಲಿದ್ದಾರೆ, ಕೆಲವರು ತಮ್ಮ ಕಂಪನಿಗಳೂ ಹೀಗೆ ಮಾಡಲಿ ಎಂದು ಹಾರೈಸಿದ್ದಾರೆ.

error: Content is protected !!