March 18, 2026
Wednesday, March 18, 2026
spot_img

ಬೌಲಿಂಗ್‌ನಲ್ಲೂ ಹೀರೋ, ಫೀಲ್ಡಿಂಗ್‌ನಲ್ಲೂ ಸ್ಟಾರ್: ವಿಶ್ವ ದಾಖಲೆ ಬರೆದ ವೆಸ್ಟ್ ಇಂಡೀಸ್‌ ವೇಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್‌ನ ವೇಗಿ ಶಮರ್ ಜೋಸೆಫ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಚ್ಚರಿಯ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಇತ್ತೀಚೆಗೆ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಟಲಿ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅವರು ಬ್ಯಾಟರ್ ಹಾಗೂ ಫೀಲ್ಡರ್ ಆಗಿ ಮಿಂಚುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸುವುದರ ಜೊತೆಗೆ, ನಾಲ್ಕು ಕ್ಯಾಚ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಶಮರ್ ಪಾತ್ರರಾಗಿದ್ದಾರೆ.

ಈ ಮುಂಚೆ ಯಾವುದೇ ಆಟಗಾರ ಅಂತರಾಷ್ಟ್ರೀಯ ಟಿ20ಯಲ್ಲಿ ಇಂತಹ ಆಲ್ ರೌಂಡ್ ಪ್ರದರ್ಶನ ನೀಡಿರಲಿಲ್ಲ. ಅವರ ಈ ಘಾತಕ ಬೌಲಿಂಗ್ ಹಾಗೂ ಚುರುಕಿನ ಫೀಲ್ಡಿಂಗ್ ನೆರವಿನಿಂದ ವಿಂಡೀಸ್ ಪಡೆ ಸುಲಭ ಜಯ ದಾಖಲಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !