ಇಂದಿನ ಓಡುತಿರುವ ಜಗತ್ತಿನಲ್ಲಿ ಮನುಷ್ಯ ಎದುರಿಸುತ್ತಿರುವ ಅತಿದೊಡ್ಡ ಸವಾಲು ಆರ್ಥಿಕತೆಯಲ್ಲ, ಬದಲಾಗಿ ‘ಇನ್ನೊಬ್ಬರನ್ನು ಸದಾ ಸಂತೋಷವಾಗಿಡುವುದು’. ಹೌದು, ಮನಃಶಾಸ್ತ್ರಜ್ಞರ ಪ್ರಕಾರ “ಪ್ಲೀಸಿಂಗ್ ಮೆಂಟಾಲಿಟಿ” ಅಥವಾ ಇತರರನ್ನು ಮೆಚ್ಚಿಸುವ ಗುಣವು ವ್ಯಕ್ತಿಯೊಬ್ಬನ ಮಾನಸಿಕ ನೆಮ್ಮದಿಯನ್ನು ಹಂತಹಂತವಾಗಿ ಕಸಿದುಕೊಳ್ಳುತ್ತಿದೆ.
ತನ್ನ ಇಷ್ಟ-ಕಷ್ಟಗಳನ್ನು ಬದಿಗಿಟ್ಟು, ಸಮಾಜ ಅಥವಾ ಸುತ್ತಮುತ್ತಲ ಜನರಿಗಾಗಿ ‘ಹೌದು’ ಎನ್ನುವ ಅನಿವಾರ್ಯತೆ ಅನೇಕರನ್ನು ಒತ್ತಡಕ್ಕೆ ತಳ್ಳುತ್ತಿದೆ. ತಜ್ಞರ ಅಭಿಪ್ರಾಯದಂತೆ, ಎಲ್ಲರನ್ನೂ ಮೆಚ್ಚಿಸಲು ಹೋಗುವುದು “ಒಂದು ತೂತು ಬಿದ್ದಿರುವ ಕೊಡಕ್ಕೆ ನೀರು ತುಂಬಿಸಿದಂತೆ”. ನಾವು ಎಷ್ಟು ಶ್ರಮವಹಿಸಿದರೂ ಅದು ಪೂರ್ಣಗೊಳ್ಳುವುದಿಲ್ಲ. ಇದು ಅಂತಿಮವಾಗಿ ವ್ಯಕ್ತಿಯಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಮಾನಸಿಕ ಬಳಲಿಕೆಗೆ ಕಾರಣವಾಗುತ್ತಿದೆ.
ಇದನ್ನೂ ಓದಿ:
ಜೀವನದಲ್ಲಿ ಇತರರಿಗೆ ಗೌರವ ನೀಡುವುದು ಎಷ್ಟು ಮುಖ್ಯವೋ, ನಮ್ಮ ಸ್ವಂತ ಅಸ್ತಿತ್ವ ಮತ್ತು ಗಡಿಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ ಎಂಬುದು ಇಂದಿನ ಕಾಲದ ಕಟು ಸತ್ಯವಾಗಿದೆ.



