ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಡಿಗ್ರಿ ಪಡೆಯದೇ ವ್ಯಕ್ತಿಯೊಬ್ಬರು ನ್ಯಾಯಾಧೀಶರಾದ ಪ್ರಕರಣ ಬೆಳಕಿಗೆ ಬಂದಿದೆ .
ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿ ಒಬ್ಬರು ಕೆಲಸ ಗಿಟ್ಟಿಸಿಕೊಂಡಿದ್ದು, ಅವರು ನಕಲಿ ಪದವಿ ಹೊಂದಿದ್ದಾರೆ ಎಂಬ ಯಾವುದೇ ಅನುಮಾನ ಬರದಂತೆ 5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ ಹೈಕೋರ್ಟ್ ನ್ಯಾಯಾಲಯವೂ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಪಾಕಿಸ್ತಾನದ ಡಾನ್ ಪತ್ರಿಕೆಯ ವರದಿಯ ಪ್ರಕಾರ, ಇಸ್ಲಾಮಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಿದೆ. ನಕಲಿ ಪದವಿಗಳ ಮೂಲಕ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ನಕಲಿ ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ ಅವರನ್ನು ಅವರ ಹುದ್ದೆಯಿಂದ ತೆಗೆದು ಹಾಕಲಾಗಿದೆ.
ಜಹಾಂಗಿರಿ ಅವರನ್ನು ಡಿಸೆಂಬರ್ 2020 ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ಅವರು ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಿಷೇಧಿಸಲಾಯಿತು.
ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮೂಲ ದಾಖಲೆಗಳನ್ನು ಆಧರಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ಜಹಾಂಗಿರಿ ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ನ್ಯಾಯಾಲಯ ಹೇಳಿದೆ, ಇದರ ಜೊತೆಗೆ ಪರೀಕ್ಷೆಯಲ್ಲಿ ನಕಲು ಹಾಗೂ ವಿದ್ಯಾರ್ಥಿಯ ಸೋಗು ಹಾಗೂ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಆರೋಪವೂ ಕೇಳಿ ಬಂದಿದೆ.
ಜಹಾಂಗಿರಿ 1988 ರಲ್ಲಿ ನಕಲಿ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ಪರೀಕ್ಷೆಗೆ ಕುಳಿತಿದ್ದ ಅವರು ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದರು. 1989 ರಲ್ಲಿ ವಿಶ್ವವಿದ್ಯಾನಿಲಯವು ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿತು. ಶಿಕ್ಷೆಯನ್ನು ಸ್ವೀಕರಿಸುವ ಬದಲು ಜಹಾಂಗಿರಿ ಮೋಸದ ವಿಧಾನಗಳನ್ನು ಬಳಸಿದರು. ಮುಂದಿನ ವರ್ಷ, ಅವರು ಇಮ್ತಿಯಾಜ್ ಅಹ್ಮದ್ ಎಂಬ ಇನ್ನೊಬ್ಬ ವಿದ್ಯಾರ್ಥಿಗೆ ನಿಯೋಜಿಸಲಾದ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ತಾರಿಕ್ ಜಹಾಂಗಿರಿ ಎಂಬ ಹೆಸರಿನಲ್ಲಿ ಮತ್ತೆ ಪರೀಕ್ಷೆಗೆ ಕುಳಿತರು ಎಂಬ ಆರೋಪ ಕೇಳಿ ಬಂದಿದೆ. ಮೂಲ ದಾಖಲೆಗಳನ್ನು ಮತ್ತು ಲಿಖಿತ ಉತ್ತರವನ್ನು ಸಲ್ಲಿಸಲು ಜಹಾಂಗಿರಿ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದ್ದರೂ, ಅವರು ಹಾಗೆ ಮಾಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.



