Thursday, January 1, 2026

ಭಾರತೀಯ ರೈಲ್ವೆಯ ಹೊಸ ಯುಗಾರಂಭ! ಶೀಘ್ರದಲ್ಲೇ ಬರಲಿದೆ ದೇಶದ ಚೊಚ್ಚಲ ಬುಲೆಟ್ ಟ್ರೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಎರಡು ಬೃಹತ್ ಯೋಜನೆಗಳ ಅಪ್‌ಡೇಟ್ ನೀಡಿದ್ದಾರೆ. ಭಾರತದ ಮೊದಲ ಬುಲೆಟ್ ರೈಲು ಮತ್ತು ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ.

ಭಾರತದ ಮೊದಲ ಹೈಸ್ಪೀಡ್ ಬುಲೆಟ್ ರೈಲು 2027ರ ಆಗಸ್ಟ್ 15ರಂದು ಅಧಿಕೃತವಾಗಿ ಸಂಚಾರ ಆರಂಭಿಸಲಿದೆ.: ಮೊದಲು ಸೂರತ್‌ನಿಂದ ಬಿಲಿಮೋರಾವರೆಗೆ, ನಂತರ ವಾಪಿ ಇಂದ ಸೂರತ್‌ವರೆಗೆ ಹಾಗೂ ಅಂತಿಮವಾಗಿ ಮುಂಬೈ-ಅಹಮದಾಬಾದ್ ಸಂಪೂರ್ಣ ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ಗುಜರಾತ್‌ನಲ್ಲಿ 9 ಮತ್ತು ಮಹಾರಾಷ್ಟ್ರದಲ್ಲಿ 3 ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಈ ಯೋಜನೆ ಒಳಗೊಂಡಿದೆ.

ಪ್ರಯಾಣಿಕರ ಆರಾಮದಾಯಕ ರಾತ್ರಿ ಪ್ರಯಾಣಕ್ಕಾಗಿ ‘ವಂದೇ ಭಾರತ್ ಸ್ಲೀಪರ್’ ರೈಲನ್ನು ಪರಿಚಯಿಸಲಾಗುತ್ತಿದೆ. ಇದು ಮೊದಲು ಗುವಾಹಟಿ-ಕೋಲ್ಕತ್ತಾ ಮಾರ್ಗದಲ್ಲಿ ಸಂಚರಿಸಲಿದೆ. ಇತ್ತೀಚೆಗೆ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಈ ರೈಲು ಗಂಟೆಗೆ 180 ಕಿ.ಮೀ ವೇಗ ತಲುಪಿ ದಾಖಲೆ ನಿರ್ಮಿಸಿದೆ.

ಬೋಗಿಗಳ ವಿವರ: ಒಟ್ಟು 16 ಬೋಗಿಗಳಿದ್ದು, 823 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.

3-ಟಯರ್ ಎಸಿ: 611 ಸೀಟುಗಳು

2-ಟಯರ್ ಎಸಿ: 188 ಸೀಟುಗಳು

1-ಟಯರ್ ಎಸಿ: 24 ಸೀಟುಗಳು

ಆರಂಭದಲ್ಲಿ 2026ಕ್ಕೆ ಗುರಿ ಹೊಂದಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಸವಾಲುಗಳಿಂದ ವಿಳಂಬವಾಗಿತ್ತು. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಯುದ್ಧೋಪಾದಿಯಲ್ಲಿ ಕಾಮಗಾರಿ ಸಾಗುತ್ತಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!