Wednesday, January 14, 2026
Wednesday, January 14, 2026
spot_img

ಟಿ20 ಕ್ರಿಕೆಟ್‌ನಲ್ಲಿ ಹೊಸ ಪ್ರಯೋಗ: ಒಂದೇ ಪಂದ್ಯದಲ್ಲಿ ಇಬ್ಬರು ‘ರಿಟೈರ್ಡ್ ಔಟ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್‌ನ ಪ್ರತಿಷ್ಠಿತ ಟಿ20 ಟೂರ್ನಿ ‘ಸೂಪರ್ ಸ್ಮ್ಯಾಶ್’ ಈಗ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಟೂರ್ನಿಯ 10ನೇ ಪಂದ್ಯದಲ್ಲಿ ನಾರ್ದರ್ನ್ ನೈಟ್ಸ್ ತಂಡವು ಗೆಲುವಿನ ಹಪಾಹಪಿಯಿಂದ ನಡೆಸಿದ ವಿಭಿನ್ನ ಪ್ರಯೋಗವು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪಂದ್ಯದ ಅತಿ ದೊಡ್ಡ ಹೈಲೈಟ್ ಎಂದರೆ ನಾರ್ದರ್ನ್ ನೈಟ್ಸ್ ತಂಡವು ತನ್ನ ಇಬ್ಬರು ಸೆಟ್ ಬ್ಯಾಟರ್‌ಗಳನ್ನು ‘ರಿಟೈರ್ಡ್ ಔಟ್’ ಮಾಡುವ ಮೂಲಕ ಪೆವಿಲಿಯನ್‌ಗೆ ವಾಪಸ್ ಕರೆಸಿಕೊಂಡಿದ್ದು. 167 ರನ್‌ಗಳ ಗುರಿ ಬೆನ್ನಟ್ಟುವ ವೇಳೆ, ರನ್ ವೇಗ ಹೆಚ್ಚಿಸುವ ಉದ್ದೇಶದಿಂದ 17ನೇ ಓವರ್‌ನಲ್ಲಿ ನಾಯಕ ಜೀತ್ ರಾವಲ್ (23) ಅವರನ್ನು ಹಾಗೂ ಮುಂದಿನ ಓವರ್‌ನಲ್ಲಿ ಕ್ಸೇವಿಯರ್ ಬೆಲ್ (9) ಅವರನ್ನು ತಂಡವು ಸ್ವಯಂಪ್ರೇರಿತವಾಗಿ ವಾಪಸ್ ಕರೆಸಿಕೊಂಡಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಆಟಗಾರರನ್ನು ‘ರಿಟೈರ್ಡ್ ಔಟ್’ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನು ನಾರ್ದರ್ನ್ ನೈಟ್ಸ್ ಬರೆಯಿತು.

ಮೊದಲು ಬ್ಯಾಟ್ ಮಾಡಿದ್ದ ಒಟಾಗೋ ತಂಡವು 20 ಓವರ್‌ಗಳಲ್ಲಿ 166 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ನಾರ್ದರ್ನ್ ನೈಟ್ಸ್ ಸಾಧಾರಣ ಆರಂಭ ಪಡೆದರೂ, ಕೊನೆಯ ಹಂತದಲ್ಲಿ ರನ್ ಗಳಿಸಲು ಪರದಾಡಿತು. ಆದರೆ, ಅಂತಿಮ ಓವರ್‌ನಲ್ಲಿ ಜಯಕ್ಕಾಗಿ 18 ರನ್‌ಗಳ ಅಗತ್ಯವಿದ್ದಾಗ ಅಬ್ಬರಿಸಿದ ನೈಟ್ಸ್ ಬ್ಯಾಟರ್‌ಗಳು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು.

Most Read

error: Content is protected !!