Monday, September 22, 2025

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ: Needle free Injection ಬಗ್ಗೆ ನಿಮಗೆ ಗೊತ್ತಿದ್ಯಾ?

ಅನೇಕರಿಗೆ ಇಂಜೆಕ್ಷನ್ ಎಂದರೆ ಭಯ, ನೋವು ಮತ್ತು ಕಿರಿಕಿರಿಯನ್ನುಂಟು ಮಾಡುವ ವಿಷಯ. ವಿಶೇಷವಾಗಿ ಮಕ್ಕಳು ಮತ್ತು ಕೆಲ ವಯಸ್ಕರಲ್ಲಿ ಸೂಜಿಯ ಭಯ ಹೆಚ್ಚಿರುವುದು ಸಾಮಾನ್ಯ. ಈ ಸಮಸ್ಯೆಯನ್ನು ನಿವಾರಿಸಲು ಇದೀಗ ಸೂಜಿ ಮುಕ್ತ ಇಂಜೆಕ್ಷನ್ ನೀಡುವ ಪದ್ದತಿ ಜಾರಿಗೆ ಬಂದಿದೆ. ಎನ್-ಎಫ್ಐಎಸ್ (Needle-Free Injection System) ತಂತ್ರಜ್ಞಾನವು ಜೆಟ್-ಇಂಜೆಕ್ಷನ್ ಮೂಲಕ ಔಷಧಿಯನ್ನು ಚರ್ಮದೊಳಗೆ ತಲುಪಿಸುವುದರಿಂದ ನೋವು, ಭಯ ಮತ್ತು ಅಸಹನೆ ಇಲ್ಲದ ಅನುಭವ ಒದಗಿಸುತ್ತದೆ.

ಎನ್-ಎಫ್ಐಎಸ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಈ ಪದ್ದತಿಯಲ್ಲಿ ಸೂಕ್ಷ್ಮ ಜೆಟ್ ಸ್ಟ್ರೀಮ್ ಚರ್ಮದೊಳಗಿನ ಸಣ್ಣ ರಂಧ್ರದ ಮೂಲಕ ಪ್ರವೇಶಿಸಿ ಔಷಧಿಯನ್ನು ನಿಖರವಾಗಿ ತಲುಪಿಸುತ್ತದೆ. ಸೂಜಿ ಬಳಕೆಯಾಗದ ಕಾರಣ ನೋವು ಕಡಿಮೆಯಾಗುತ್ತದೆ, ಭಯ ಉಂಟಾಗುವುದಿಲ್ಲ ಹಾಗೂ ಅಂಗಾಂಶ ಹಾನಿಯ ಸಾಧ್ಯತೆ ಕಡಿಮೆಯಾಗುತ್ತದೆ.

ವ್ಯಾಕ್ಸಿನೇಷನ್, ನೋವು ನಿರ್ವಹಣೆ, ಗ್ರೋತ್ ಹಾರ್ಮೋನ್ ಥೆರಪಿ, ಹಾಗೂ ಐವಿಎಫ್ (IVF) ಪ್ರಕ್ರಿಯೆಗಳಲ್ಲಿ ಈ ವಿಧಾನವನ್ನು ಬಳಸಬಹುದಾಗಿದೆ. ಸಾಂಪ್ರದಾಯಿಕ ಇಂಜೆಕ್ಷನ್‌ಗಿಂತ ಹೆಚ್ಚು ಸುರಕ್ಷಿತ, ನಿಖರ ಹಾಗೂ ಅನುಕೂಲಕರವಾಗಿದೆ.

ಎನ್-ಎಫ್ಐಎಸ್ ತಂತ್ರಜ್ಞಾನಕ್ಕೆ ಯುಎಸ್ ಪೇಟೆಂಟ್ ಸೇರಿದಂತೆ ಸಿಡಿಎಸ್ಸಿಓ, ಸಿಇ, ಎಂಡಿಎಸ್ಎಪಿ ಮತ್ತು ಐಎಸ್ಓ 13485 ನಿಯಂತ್ರಕ ಸಂಸ್ಥೆಗಳ ಅನುಮೋದನೆ ದೊರೆತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಲಾಗಿದೆ.

ಮಕ್ಕಳಿಗೆ ಹೆಚ್ಚುವರಿ ಪ್ರಯೋಜನ
ಮಕ್ಕಳಲ್ಲಿ ಸೂಜಿಯ ಭಯವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಪದ್ದತಿಯು ನೋವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುವುದರಿಂದ, ಮಕ್ಕಳು ಮತ್ತು ಅವರ ಪೋಷಕರಿಗೆ ಆತ್ಮಸ್ಥೈರ್ಯ ನೀಡುತ್ತದೆ.

ಇದನ್ನೂ ಓದಿ