March 25, 2026
Wednesday, March 25, 2026
spot_img

ಯುದ್ಧದ ಮಧ್ಯೆ ಹೊರಬಂತು ಹೊಸ ಅಸ್ತ್ರ: ಡೂಮ್ಸ್‌ಡೇ ಕ್ಷಿಪಣಿ ಪರೀಕ್ಷೆ ನಡೆಸಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಭೀತಿ ಮತ್ತೆ ಚರ್ಚೆಗೆ ಬಂದಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೇ ಅಮೆರಿಕ ತನ್ನ ಶಕ್ತಿಶಾಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ.

ಕ್ಯಾಲಿಫೋರ್ನಿಯಾ ಕರಾವಳಿಯ ಸಮೀಪದಲ್ಲಿರುವ ವ್ಯಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ಮಿನಿಟ್‌ಮ್ಯಾನ್-III ಅಂತರ್ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿ ಪರೀಕ್ಷೆ ನಡೆಸಿದೆ. ಸಾಂಟಾ ಬಾರ್ಬರಾ ಸಮೀಪದಿಂದ ರಾತ್ರಿ ಸುಮಾರು 11 ಗಂಟೆಗೆ ಈ ಕ್ಷಿಪಣಿ ಉಡಾವಣೆಯಾಯಿತು ಎಂದು ತಿಳಿದುಬಂದಿದೆ.

ಈ ಕ್ಷಿಪಣಿ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ ಹಲವು ಪಟ್ಟು ಹೆಚ್ಚು ವಿನಾಶಕಾರಿ ಶಕ್ತಿ ಹೊಂದಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಸುಮಾರು 13,000 ಕಿಲೋಮೀಟರ್‌ಗೂ ಅಧಿಕ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ.

ಇದನ್ನೂ ಓದಿ:

ಮಿನಿಟ್‌ಮ್ಯಾನ್-III ಕ್ಷಿಪಣಿ ಸುಮಾರು 9,600 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲದು. ಗಂಟೆಗೆ ಸುಮಾರು 24,000 ಕಿಲೋಮೀಟರ್ ವೇಗದಲ್ಲಿ ಚಲಿಸಿ ದೂರದ ಖಂಡಾಂತರ ಗುರಿಗಳನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿದೆ.

1970ರ ದಶಕದಿಂದಲೇ ಅಮೆರಿಕದ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಈ ಕ್ಷಿಪಣಿಯ ಪರೀಕ್ಷೆ, ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !