March 11, 2026
Wednesday, March 11, 2026
spot_img

ರಾಜಾರೋಷವಾಗಿ ಬಸ್‌ಸ್ಟಾಂಡ್‌ನ ಎದುರೇ ವಾಮಾಚಾರ? ಬೆಚ್ಚಿಬಿದ್ದ ಗದಗದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಿನ ಕಾಲದಲ್ಲಿ ಮಾಟ ಮಂತ್ರ ಯಾರು ಮಾಡ್ತಾರೆ, ಮಾಡಿದರೂ ಯಾವುದೋ ಹಳ್ಳಿಯಲ್ಲಿ ಯಾರೂ ಇಲ್ಲದ ಜಾಗದಲ್ಲಿ ಮಾಡುತ್ತಾರೆ ಎನ್ನಬಹುದು. ಆದರೆ ಗದಗದಲ್ಲಿ ರಾಜಾರೋಷವಾಗಿ ಬಸ್‌ಸ್ಟಾಂಡ್‌ನಲ್ಲಿ ವಾಮಾಚಾರ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿಯ ಹುಡ್ಕೋ ಕಾಲೋನಿಯಲ್ಲಿರುವ ಬಸ್‌ಸ್ಟಾಂಡ್‌ನಲ್ಲಿ ವಾಮಾಚಾರ ಮಾಡಲಾಗಿದೆ. ಮಂಡಲ, ಕಪ್ಪು ಗೊಂಬೆಗಳು, ಮೊಟ್ಟೆ, ಅಡಿಕೆ, ನಿಂಬೆಹಣ್ಣನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.

ದೊಡ್ಡ ನಕ್ಷತ್ರದ ಆಕಾರದಲ್ಲಿ ಮಂಡಲವೊಂದನ್ನು ಬರೆದಿದ್ದಾರೆ. ಇದರ ಪಕ್ಕ ಹೋದ ವರ್ಷ ನಾ ಬಯಸಿದ್ದು ಸಿಕ್ಕಿಲ್ಲ, ಆದ್ರೆ ಈ ವರ್ಷ ತೊಗೊಳದೇ ಬಿಡಲ್ಲ ಎಂದು ಬರೆಯಲಾಗಿದೆ. ಇದನ್ನು ನೋಡಿದ ಜನರು ಗಾಬರಿಯಲ್ಲಿ ಓಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಆರೋಪಿಗಳ ಬಂಧನಕ್ಕೆ ಹುಡ್ಕೋ ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !