ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯ ಜನಮನ ಗೆದ್ದ ಯಕ್ಷಗಾನ ರಂಗಭೂಮಿಗೆ ದೊಡ್ಡ ಆಘಾತ ಎದುರಾಗಿದೆ. ಮಂದಾರ್ತಿ ಎರಡನೇ ಮೇಳದ ಹಿರಿಯ ಕಲಾವಿದ ಈಶ್ವರ ಗೌಡ ಅವರು ಪ್ರಸಂಗ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಹಿಷಾಸುರ ಪಾತ್ರದಲ್ಲಿ ಅದ್ಭುತ ನಟನೆ ನೀಡಿದ ಬಳಿಕ, ವೇಷ ಕಳಚುತ್ತಿದ್ದಾಗಲೇ ಅವರು ಅಸ್ವಸ್ಥರಾದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

