Monday, October 20, 2025

ನಗು ಮಾಂತ್ರಿಕನ ಮನೆಯಲ್ಲಿ ಸೂತಕದ ಛಾಯೆ: ಪ್ರಾಣೇಶ್ ತಾಯಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಗಾವತಿ ತಾಲ್ಲೂಕಿನ ಪ್ರಸಿದ್ಧ ಹಾಸ್ಯ ಭಾಷಣಕಾರ ಪ್ರಾಣೇಶ್ ಅವರ ತಾಯಿ, ಸತ್ಯವತಿ ಬಾಯಿ (85), ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಇಂದು (ಅಕ್ಟೋಬರ್ 19) ಗಂಗಾವತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸತ್ಯವತಿ ಬಾಯಿ ತಮ್ಮ ಮಗ ಪ್ರಾಣೇಶ್ ಅವರ ಸಾಹಿತ್ಯಾಭಿರುಚಿ ಮತ್ತು ಹಾಸ್ಯ ಪ್ರತಿಭೆಯನ್ನು ಬೆಳೆಸಲು ಅವಿರತ ಬೆಂಬಲ ನೀಡಿದ್ದರು. ಪ್ರಾಣೇಶ್ ತಮ್ಮ ತಾಯಿಯಿಂದಲೇ ಕನ್ನಡ ಸಾಹಿತ್ಯದ ರಂಗನ್ನು ಅರ್ಥಮಾಡಿಕೊಂಡಿದ್ದು, 1982 ರಿಂದ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪ್ರಾಣೇಶ್ 1961ರ ಸೆಪ್ಟೆಂಬರ್ 8ರಂದು ಗಂಗಾವತಿಯಲ್ಲಿ ಜನಿಸಿದರು. 1994ರಿಂದ ಹಾಸ್ಯ ಭಾಷಣದ ಮೂಲಕ “ಗಂಗಾವತಿ ಬೀಚಿ” ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಅವರ ಹಾಸ್ಯ ಭಾಷಣಗಳು ದೂರದರ್ಶನ ಹಾಗೂ ಆಕಾಶವಾಣಿ ಮೂಲಕ ಜನಪ್ರಿಯಗೊಂಡಿದ್ದು, ಉತ್ತರ ಕರ್ನಾಟಕದ ಹೊರಗೂ ಅವರ ಪ್ರಸಿದ್ಧಿ ಪಡೆದಿದ್ದು, ಮಲೇಷ್ಯಾ, ಹಾಂಕಾಂಗ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಮುಂತಾದ ದೇಶಗಳಲ್ಲಿ ಅವರ ಕಾರ್ಯಕ್ರಮಗಳು ಯಶಸ್ವಿಯಾಗಿವೆ.

ಸತ್ಯವತಿ ಬಾಯಿ ಅವರ ನಿಧನಕ್ಕೆ ಸ್ಥಳೀಯ ಸಾಹಿತ್ಯ ಪರಿಷತ್ತು ಮತ್ತು ಹಾಸ್ಯ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಸಾಹಿತ್ಯಕಾರರು, ಸ್ಥಳೀಯರು ಮತ್ತು ಕುಟುಂಬದ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ.

error: Content is protected !!