March 15, 2026
Sunday, March 15, 2026
spot_img

ಅಖಿಲ ಭಾರತೀಯ ಸ್ತರದಲ್ಲಿ ಈ ವರ್ಷ ಒಟ್ಟು 75 ಕಾರ್ಯಕರ್ತ ಪ್ರಶಿಕ್ಷಣ ವರ್ಗ: ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮುಂಬರುವ ದಿನಗಳಲ್ಲಿ ದೇಶದ ಒಟ್ಟು 63 ಕಡೆಗಳಲ್ಲಿ ಸಂಘ ಶಿಕ್ಷಾ ವರ್ಗಗಳು ನಡೆಯಲಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.


ಹರಿಯಾಣದ ಸಮಾಲ್ಖಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೆಸ್ಸೆಸ್ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬಳಿಕ ಮಾತನಾಡಿದ ಅವರು, ಕ್ಷೇತ್ರೀಯ ಮಟ್ಟದ ವರ್ಗಗಳು 11 ನಡೆಯಲಿವೆ. ಅಖಿಲ ಭಾರತೀಯ ಸ್ತರದಲ್ಲಿ 1 ವರ್ಗ ಸೇರಿದಂತೆ ಒಟ್ಟು 75 ವರ್ಗಗಳು ನಡೆಯಲಿವೆ. ಕೆಲವು ವರ್ಗಗಳು 15 ದಿನಗಳದ್ದಾದರೆ, ಇನ್ನೂ ಕೆಲವು 21 ದಿನಗಳದ್ದಾಗಿವೆ ಎಂದರು.


ಸಂಘದ ದೃಷ್ಟಿಯಿಂದ ಕಾರ್ಯಕರ್ತರು ಗೋಸೇವಾ, ಗ್ರಾಮವಿಕಾಸದಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಗೋಸೇವಾ ಕಾರ್ಯ ಮಾಡಬಹುದು ಆದರೆ ನಗರಗಳಲ್ಲಿ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ನಗರಗಳಲ್ಲಿ ವಾಸ ಮಾಡುವ ನಾಗರಿಕರು ತಮ್ಮ ಮನೆಯ ಮಹಡಿಯ ಮೇಲೆ ಚಿಕ್ಕ ತೋಟವನ್ನು ಮಾಡಿ ಅದಕ್ಕೆ ಗೋ ಆಧಾರಿತ ದೇಸೀ ವಸ್ತುಗಳನ್ನು ಉಪಯೋಗಿಸುವ ಮೂಲಕಗೋಸೇವಾ ಕಾರ್ಯಕ್ಕೆ ಕೈ ಜೋಡಿಸಬಹುದು. ದೇಶಾದ್ಯಂತ ಅನೇಕ ವ್ಯಕ್ತಿಗಳು ಕಾರ್ಯನಿರತರಾಗಿದ್ದಾರೆ. ತಮ್ಮ ಮನೆಗಳಲ್ಲಿ, ವಿದ್ಯಾಲಯಗಳಲ್ಲಿ, ಕಛೇರಿಗಳಲ್ಲಿ ಪರಿಸರ ಪೂರಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !