Thursday, November 27, 2025

ಮಾಜಿ ನಾಯಕನಿಗೆ ಮಣೆ: ಪಾಕ್ ಟಿ20 ತಂಡಕ್ಕೆ ಬಾಬರ್-ನಸೀಮ್ ಭರ್ಜರಿ ಕಮ್‌ಬ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ! ಸುಮಾರು 10 ತಿಂಗಳ ನಂತರ ಮಾಜಿ ನಾಯಕ ಬಾಬರ್ ಆಜಂ ಮತ್ತು ವೇಗಿ ನಸೀಮ್ ಶಾ ಟಿ20 ತಂಡಕ್ಕೆ ಮರಳಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರಕಟಿಸಿರುವ ತಂಡಗಳಲ್ಲಿ ಇವರಿಗೆ ಸ್ಥಾನ ಲಭಿಸಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿರುವ ಪಾಕಿಸ್ತಾನ ತಂಡ, ಇದೀಗ ಅದೇ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಸಿದ್ಧವಾಗಿದೆ.

ಸರಣಿಯ ವೇಳಾಪಟ್ಟಿ:

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಅಕ್ಟೋಬರ್ 28 ರಿಂದ ನವೆಂಬರ್ 1 ರವರೆಗೆ (ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಪಂದ್ಯಗಳು).

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ: ನವೆಂಬರ್ 4 ರಿಂದ 8 ರವರೆಗೆ (ಫೈಸಲಾಬಾದ್‌ನ ಇಕ್ಬಾಲ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು).

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ: ನವೆಂಬರ್ 11 ರಿಂದ 15 ರವರೆಗೆ.

ತ್ರಿಕೋನ ಟಿ20 ಸರಣಿ: ನವೆಂಬರ್ 17 ರಿಂದ 29 ರವರೆಗೆ.

ಬಾಬರ್-ನಸೀಮ್ ಮರುಪ್ರವೇಶದ ವಿವರ:

ಬಾಬರ್ ಆಜಂ: ಡಿಸೆಂಬರ್ 13, 2024 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದರು. 10 ತಿಂಗಳ ನಂತರ ಮತ್ತೆ ಟಿ20 ತಂಡಕ್ಕೆ ಮರಳಿದ್ದಾರೆ.

ನಸೀಮ್ ಶಾ: ನವೆಂಬರ್ 16, 2024 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದ ನಸೀಮ್, ಸುಮಾರು 11 ತಿಂಗಳ ನಂತರ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಕಟಿಸಲಾದ ಪಾಕಿಸ್ತಾನ ತಂಡಗಳು:

ಪಾಕಿಸ್ತಾನ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯ್ಯುಬ್, ಶಾಹೀನ್ ಶಾ ಅಫ್ರಿದಿ, ಉಸ್ಕೆಮಾನ್ ಖಾನ್. ಮೀಸಲು ಆಟಗಾರರು: ಫಖರ್ ಜಮಾನ್, ಹ್ಯಾರಿಸ್ ರೌಫ್, ಸುಫ್ಯಾನ್ ಮುಖೀಮ್.

ಪಾಕಿಸ್ತಾನ ಏಕದಿನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸಿಬುಲ್ಲಾ, ಹಸನ್ ನವಾಜ್, ಹುಸೇನ್ ತಲತ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್.

error: Content is protected !!