Tuesday, October 28, 2025

ಮಳೆಯಿಂದ ತುಂಬಿದ್ದ ಗುಂಡಿಯಲ್ಲಿ ಮುಳುಗಿ ಎರಡು ವರ್ಷದ ಕಂದಮ್ಮನ ದುರಂತ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯ ಸಮೀಪವೇ ಇರುವ ಖಾಲಿ ಜಾಗವೊಂದರಲ್ಲಿ ಮಳೆ ನೀರಿನಿಂದ ತುಂಬಿದ್ದ ಗುಂಡಿಯಲ್ಲಿ ಮುಳುಗಿ ಪುಟ್ಟ ಮಗುವಿನ ದುರಂತ ಸಾವು ಸಂಭವಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಎರಡು ವರ್ಷ 10 ತಿಂಗಳ ಪ್ರೇಣಿಕಾ ಶ್ರೀ, ಚೆಂಗಲ್ಪಟ್ಟು ಬಳಿಯ ಮಾಂಗಡುವಿನ ಜನನಿ ನಗರದ ನಿವಾಸಿಯಾಗಿದ್ದರು.

ಅಕ್ಟೋಬರ್ 22 ರಂದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ತಾಯಿ ಪ್ರಿಯದರ್ಶಿನಿ ಮತ್ತು ಮಗು ಇಬ್ಬರೂ ನಿದ್ರೆಗೆ ಜಾರಿದ್ದರು. ಆದರೆ, ಸಂಜೆ 4.30ರ ಸುಮಾರಿಗೆ ತಾಯಿ ಮತ್ತೆ ಎಚ್ಚರವಾದಾಗ, ಪ್ರೇಮಿಕಾ ಅವರ ಪಕ್ಕದಲ್ಲಿ ಇರಲಿಲ್ಲ ಎಂದು ಮಾಂಗಡು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

ಆಗ ತಾಯಿ ಮತ್ತು ನೆರೆಹೊರೆಯವರು ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಕೊನೆಗೆ ಪಕ್ಕದ ಖಾಲಿ ಜಾಗದಲ್ಲಿ ಮಳೆಯಿಂದಾಗಿ ತುಂಬಿದ್ದ ಗುಂಡಿಯಲ್ಲಿ ಮುಳುಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

error: Content is protected !!