Saturday, October 11, 2025

ವೈಭವದ ದರುಶನ: ವಜ್ರ ವೈಡೂರ್ಯಗಳ ಕಿರೀಟ ತೊಟ್ಟು ಕಂಗೊಳಿಸಿದ ಚಾಮುಂಡಿ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ವರ್ಷಕ್ಕೊಮ್ಮೆ ಮಾತ್ರ ನಡೆಯುವ ವಿಶಿಷ್ಟ ‘ಮುಡಿ ಉತ್ಸವ’ ಶುಕ್ರವಾರ ರಾತ್ರಿ ಚಾಮುಂಡಿ ಬೆಟ್ಟದಲ್ಲಿ ಅತ್ಯಂತ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಈ ಉತ್ಸವದ ವಿಶೇಷವೆಂದರೆ, ಮೈಸೂರಿನ ಮಹಾರಾಜರು ದೇವಿಗೆ ಉಡುಗೊರೆಯಾಗಿ ನೀಡಿರುವ ವಜ್ರ ವೈಡೂರ್ಯಗಳು ಸೇರಿದಂತೆ ಸಮಸ್ತ ಅಮೂಲ್ಯ ಆಭರಣಗಳನ್ನು ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಧಾರಣೆ ಮಾಡಿದ್ದು.

ಸಾರ್ವಕಾಲಿಕ ಶ್ರೀಮಂತ ಆಭರಣಗಳಿಂದ ಅಲಂಕೃತಗೊಂಡಿದ್ದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯು ಕಣ್ಮನ ಸೆಳೆಯುವಂತೆ ಕಂಗೊಳಿಸಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಒಂದು ಸುತ್ತು ಭವ್ಯ ಪ್ರದಕ್ಷಿಣೆ ಮಾಡಿಸಲಾಯಿತು.

ಪ್ರದಕ್ಷಿಣೆಯ ನಂತರ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಮುಡಿ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮುಡಿ ಉತ್ಸವದ ದಿನದಂದು ಮಾತ್ರ ಈ ಐತಿಹಾಸಿಕ ಮತ್ತು ರಾಜಮನೆತನದ ಆಭರಣಗಳನ್ನು ತಾಯಿಗೆ ಧರಿಸಿ, ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ಅಪೂರ್ವ ದರ್ಶನವು ಭಕ್ತರಿಗೆ ದೈವಿಕ ಅನುಭವ ನೀಡಿತು.

error: Content is protected !!