Thursday, January 8, 2026

ಮ್ಯಾಪಿಂಗ್‌ ಮಾಡೋಕೆ ಹೋದಾಗ ಮಹಿಳೆಯೇ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದಾರೆ: ಲಾಡ್

ಹೊಸದಿಗಂತ ವರದಿ ಹುಬ್ಬಳ್ಳಿ:

ಚಾಲುಕ್ಯ ನಗರದಲ್ಲಿ ಮತದಾರರ ಮ್ಯಾಪಿಂಗ್ ಮಾಡಲು ಹೋದಾಗ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ವಶಕ್ಕೆ ಪಡೆಯಲು ಹೋದಾಗ ಅವರೇ ೧೦ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆ ತಾನೇ ವಿವಸ್ತ್ರ ಆಗಿರುವ ಕುರಿತು ವಿಡಿಯೋಗಳಿವೆ. ಸ್ವಲ್ಪ ವಾಸ್ತವ ಎಲ್ಲರೂ ಅರಿತುಕೊಳ್ಳಬೇಕು. ಪೊಲೀಸ್ ಇಲಾಖೆ ಸರಿಯಾಗಿ ಕೆಲಸ‌ ಮಾಡಿದೆ ಎಂದರು.
ಇಂತಹ ಘಟನೆಗಳು‌ ನಡೆದಾಗ ವಿಡಿಯೋಗಳು ವೈರಲ್ ಆಗುತ್ತವೆ. ಮತದಾರ ಪರಿಷ್ಕರಣೆ ಹೋದಾಗ ಗಲಾಟೆಯಾಗಿದೆ. ವೈಯಕ್ತಿಕ ವಾಗಿ ಆ ಮಹಿಳೆಯ ಬಗ್ಗೆ ಮಾತನಾಡಲ್ಲ. ಆ ಮಹಿಳೆ ಮಾಡಿರುವುದು ಸರಿಯಲ್ಲ. ಬಿಜೆಪಿ ಪ್ರತಿಭಟನೆ‌ ಮಾಡಲಿ. ಮಹಿಳೆಯದೇ ತಪ್ಪು ಇದೆ ಎಂದು ತಿಳಿಸಿದರು.

error: Content is protected !!