February 24, 2026
Tuesday, February 24, 2026
spot_img

ಮದುವೆಯಾದ ಕೆಲವೇ ಗಂಟೆಯಲ್ಲಿ ಗಂಡ ಬೇಡ, ಬಾಯ್‌ಫ್ರೆಂಡ್‌ ಬೇಕು ಎಂದು ಹೇಳಿದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಯಾದ ಕೆಲವೇ ಗಂಟೆಗಳಲ್ಲಿ ನನಗೆ ಗಂಡ ಬೇಡ, ನನ್ನ ಬಾಯ್‌ಫ್ರೆಂಡ್‌ ಬೇಕು ಎಂದು ಹೇಳಿದ ಮಹಿಳೆ ಪತಿಯನ್ನು ತೊರೆದಿದ್ದಾಳೆ.

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ನನ್ನ ಬಾಯ್‌ಫ್ರೆಂಡ್‌ ಬೇಕು ಎಂದು ಹೇಳಿ ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ಮದುವೆ ಮನೆಯಿಂದ ಈಗಷ್ಟೇ ಬಂದಿದ್ದ ಎರಡೂ ಕುಟುಂಬ ವಧುವಿನ ಅವತಾರಕ್ಕೆ ಮುಜುಗರಪಟ್ಟುಕೊಂಡಿದ್ದಾರೆ. ಎರಡೂ ಕುಟುಂಬಕ್ಕೆ ಸಾರ್ವಜನಿಕವಾಗಿ ಅವಮಾನವಾಗಿದ್ದು, ಏನು ಮಾಡೋದು ತಿಳಿಯದೆ ಸುಮ್ಮನಾಗಿದ್ದಾರೆ.

ಮದುವೆಯ ನಂತರ ವಧು ಗಂಡನ ಮನೆಗೆ ತೆರಳದೇ ಸೀದ ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ಈ ಮದುವೆ ಬೇಡ. ನನಗೆ ಬಾಯ್‌ಫ್ರೆಂಡ್‌ ಇದ್ದಾನೆ. ಅವನ ಜೊತೆ ಇರೋಕೆ ಇಷ್ಟವಿದೆ ಎಂದಿದ್ದಾಳೆ. ತಕ್ಷಣ ಎರಡೂ ಕುಟುಂಬದವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಕೌನ್ಸಿಲಿಂಗ್‌, ರಾಜಿ ಏನೇ ಮಾಡಿದರೂ ವಧು ಜಗ್ಗಿಲ್ಲ. ಮನೆಯಲ್ಲಿ ಫೋರ್ಸ್‌ ಮಾಡಿದ್ದಕ್ಕೆ ಮದುವೆ ಆದೆ ಎಂದು ಪಟ್ಟು ಹಿಡಿದಿದ್ದಾಳೆ.

ಈ ಕಡೆ ವರ ಮಾತ್ರ ಬೇಸರದಿಂದಲೇ ಹೆಂಡತಿಯನ್ನು ಬಿಟ್ಟುಕೊಟ್ಟಿದ್ದಾನೆ. ಈಕೆ ಇನ್ನೊಬ್ಬ ಹುಡುಗನನ್ನು ಇಷ್ಟಪಟ್ಟಿದ್ದು ನನಗೇ ಗೊತ್ತಿಲ್ಲ. ಮನಸ್ಸಿನಲ್ಲಿ ಇನ್ನೊಬ್ಬ ಇದ್ದಾನೆಂದು ಗೊತ್ತಿದ್ದರೆ ನಾನ್ಯಾಕೆ ಮದುವೆಯಾಗುತ್ತಿದೆ? ಬಲವಂತದ ಸಂಬಂಧ ಉಳಿಯೋದಿಲ್ಲ. ಆಕೆಯನ್ನು ಬಿಟ್ಟುಬಿಡಿ ಎಂದು ವರ ಹೇಳಿದ್ದಾನೆ. ಎರಡೂ ಕುಟುಂಬಗಳು ಮಾತನಾಡಿ ಮದುವೆ ರದ್ದುಮಾಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !